ಗ್ಯಾಂಗ್‌ಟಾಕ್: ಸಿಕ್ಕಿಂನಲ್ಲಿ ಸೇನೆಯ ವಾಹನ ಕಂದಕಕ್ಕೆ ಉರುಳಿ (16 Jawans Martyred) 16 ಯೋಧರು ಹುತಾತ್ಮರಾಗಿದ್ದು, ನಾಲ್ವರಿಗೆ ಗಾಯಗಳಾಗಿವೆ. ಉತ್ತರ ಸಿಕ್ಕಿಂನ ಲಾಚೆನ್ ಪಟ್ಟಣದ ಬಳಿ ಶುಕ್ರವಾರ ಬೆಳಗ್ಗೆ ಲಾಚೆನ್ ಪಟ್ಟಣದ ಬಳಿ ಭಾರಿ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರು ಯೋಧರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಯೋಧರ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಚಟ್ಟೆನ್ ಪ್ರದೇಶದಿಂದ ಥಂಗು ಕಡೆಗೆ ವಾಹನ ಸಾಗುವಾಗ ತಿರುವಿನಲ್ಲಿ ವಾಹನವು ಜಾರಿ ಆಳವಾದ ಕಂದಕಕ್ಕೆ ಬಿದ್ದಿದೆ. ಹುತಾತ್ಮರಾದ 16 ಯೋಧರಲ್ಲಿ ಮೂವರು ಜೂನಿಯರ್ ಕಮಿಷನ್ಡ್ ಆಫೀಸರ್‌ಗಳಾಗಿದ್ದಾರೆ. ಉಳಿದವರು ಸೈನಿಕರಾಗಿದ್ದಾರೆ ಎಂದು ತಿಳಿದುಬಂದಿದೆ.
“ಜೆಮಾ ಮಾರ್ಗವಾಗಿ ಸೇನೆಯ ಟ್ರಕ್ ತೆರಳುವಾಗ ಇಕ್ಕಟ್ಟಿನ ತಿರುವಿನಲ್ಲಿ ವಾಹನ ಜಾರಿ ಕಂದಕಕ್ಕೆ ಉರುಳಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಗಾಯಾಳು ಯೋಧರನ್ನು ಏರ್‌ಲಿಫ್ಟ್ ಮಾಡಲಾಗಿದೆ” ಎಂದು ಸೇನೆ ತಿಳಿಸಿದೆ.
ಇದನ್ನೂ ಓದಿ | Avalanche In Kashmir | ಕಾಶ್ಮೀರದಲ್ಲಿ ತೀವ್ರ ಹಿಮಪಾತ ಉಂಟಾಗಿ ಮೂವರು ಯೋಧರು ಹುತಾತ್ಮ