Site icon Vistara News

Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

Bomb threat

16-Year-old Boy Behind Threat Emails To Delhi Schools? Police React To Claims

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (New Delhi) ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ (NCR) ಸುಮಾರು 100 ಶಾಲೆಗಳಿಗೆ (Schools) ಇ-ಮೇಲ್‌ ಮೂಲಕ ಒಡ್ಡಲಾದ ಬಾಂಬ್ ಬೆದರಿಕೆ (Bomb Threat) ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಶಾಲೆಗಳು ಬಾಂಬ್‌ ಬೆದರಿಕೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಮರಳಿ ಮನೆಗೆ ಕಳುಹಿಸಿವೆ. ಇದಾದ ಬಳಿಕ ಪೊಲೀಸರು ಇದು ಹುಸಿ ಬಾಂಬ್‌ ಕರೆ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆ ಒಡ್ಡಿದವ 16 ವರ್ಷದ ಪೋರ ಎಂದು ತಿಳಿದುಬಂದಿದೆ.

ಹೌದು, ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿರುವ 16 ವರ್ಷದ ಬಾಲಕನು, ತಮಾಷೆಗಾಗಿ ಶಾಲೆಗಳಿಗೆ ಬಾಂಬ್‌ ದಾಳಿ ಕುರಿತು ಇ-ಮೇಲ್‌ ಮಾಡಿದ್ದಾನೆ. 16 ವರ್ಷದ ಬಾಲಕನು ತಮಾಷೆಗಾಗಿ ಮೇಲ್‌ ಮಾಡಿದ್ದು, ಇದರಿಂದ ಆತ ಖುಷಿ ಅನುಭವಿಸಿದ್ದಾನೆ. ಪ್ರಾಂಕ್‌ ಮಾಡಲು ಹೋಗಿ ಇಂತಹ ಅಚಾತುರ್ಯ ಎಸಗಿದ್ದಾನೆ. ಕೊನೆಗೆ ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದಿಷ್ಟು ಪೊಲೀಸ್‌ ಮೂಲಗಳ ಪ್ರಕಾರ, ಬಾಲಕನು ಮೇಲ್‌ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ವಿದೇಶಿ ಸರ್ವರ್‌ಗಳ ಮೂಲಕ ಡೇಟಾವನ್ನು ರೂಟ್ ಮಾಡುವ ಮತ್ತು ದಾರಿ ತಪ್ಪಿಸುವ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಅನ್ನು ಬಳಸಿಕೊಂಡು ಇಮೇಲ್‌ನ ಮೂಲವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸ್ವಲ್ಪ ಸಮಯ ತೆಗೆದುಕೊಂಡರು. ವಿಪಿಎನ್ ಟ್ರಾಫಿಕ್ ಅನ್ನು ಹಿಂತೆಗೆದುಕೊಂಡ ನಂತರ ಮತ್ತು ಇಮೇಲ್‌ನ ಮೂಲವನ್ನು ಕಂಡುಹಿಡಿದ ನಂತರ ಪೊಲೀಸರು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು- ಅನನ್ಯ ಐಡೆಂಟಿಫೈಯರ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ ದಾಳಿ ಕುರಿತ ಬೆದರಿಕೆ ಇ-ಮೇಲ್‌ಗಳು ರವಾನೆಯಾಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಲಂಕಷ ತನಿಖೆ, ಪರಿಶೀಲನೆ ನಡೆಸಿದ ಪೊಲೀಸರು, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಪೋಷಕರು, ಶಾಲೆಗಳ ಆಡಳಿತ ಮಂಡಳಿಯು ನಿಟ್ಟುಸಿರು ಬಿಡುವಂತೆ ಮಾಡಿದರು. “ದೆಹಲಿ ಶಾಲೆಗಳಿಗೆ ಬಾಂಬ್‌ ದಾಳಿ ನಡೆಸುವುದಾಗಿ ರವಾನೆಯಾಗಿರುವ ಬೆದರಿಕೆಯು ಹುಸಿ ಬೆದರಿಕೆ ಎಂಬಂತೆ ಕಾಣುತ್ತಿದೆ. ಹಾಗಾಗಿ, ಯಾರೂ ಕೂಡ ಆತಂಕಕ್ಕೀಡಾಗಬಾರದು” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‌Bomb Threat: ಬಾಂಬ್‌ ಬೆದರಿಕೆ ಇಮೇಲ್ ಮೂಲ ಪತ್ತೆ, ದಿಲ್ಲಿಯ 100ಕ್ಕೂ ಅಧಿಕ ಶಾಲೆ ಕ್ಲೋಸ್

Exit mobile version