Site icon Vistara News

Child Marriage: ಅತ್ಯಾಚಾರ ಎಸಗಿದವನ ಜತೆಗೇ 16 ವರ್ಷದ ಬಾಲಕಿಯ ಮದುವೆ, ಮೂವರ ಬಂಧನ

Gang rape by friends

ತಿರುವನಂತಪುರಂ: ಎರಡು ವರ್ಷಗಳ ಹಿಂದೆ ಸತತವಾಗಿ ಅತ್ಯಾಚಾರ ನಡೆಸಿದ ದುರುಳನ ಜತೆಗೇ 16 ವರ್ಷದ ಬಾಲಕಿಯ ಮದುವೆ (Child Marriage) ಮಾಡಿಸಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ತಿರುವನಂತಪುರಂನಲ್ಲಿ ಜನವರಿ 18ರಂದು ಮದುವೆ ನಡೆದಿದ್ದು, ಪ್ರಕರಣ ಸುದ್ದಿಯಾಗುತ್ತಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಅಮೀರ್‌ (23) ಎಂಬಾತನು 2021ರಲ್ಲಿ ಬಾಲಕಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದ. ಪ್ರಕರಣದಲ್ಲಿ ನಾಲ್ಕು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಆತ, ಬಳಿಕ ಜಾಮೀನು ಪಡೆದು ಹೊರಬಂದಿದ್ದಾನೆ. ಈತನ ಜತೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಅಮೀರ್‌, ಅನ್ವರ್‌ ಸಾದತ್‌ (39) ಹಾಗೂ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ, ಇವರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಬಾಲಕಿಯು ಹಲವು ದಿನಗಳಾದರೂ ಶಾಲೆಗೆ ಬಾರದ ಕಾರಣ ವಿಚಾರಿಸಿದಾಗ ಆಕೆಯ ಮದುವೆಯಾಗಿದೆ ಎಂದು ತಿಳಿದುಬಂದಿದೆ. ಅದರಂತೆ, ಪ್ರಕರಣದ ದಾಖಲಾಗಿದ್ದು, ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಅಮೀರ್‌, ಜಾಮೀನು ಪಡೆದು ಹೊರಬಂದ ಬಳಿಕವೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಜ.17ರ ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಸೆರೆ; ಸಹಕರಿಸಿದ ಮತ್ತಿಬ್ಬರ ಬಂಧನ

Exit mobile version