ನವದೆಹಲಿ: 68 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಹುಡುಗಿಯನ್ನು ಅತ್ಯಾಚಾರ (Teen Raped) ಮಾಡುವುದನ್ನು ಆತನ ಪುತ್ರನೇ ಮೊಬೈಲ್ ಫೋನ್‌ನಲ್ಲಿ ಚಿತ್ರಿಕರಿಸಿದ್ದಾನೆ. ತನ್ನ ತಂದೆ ವಾಮಾಚಾರ ಮಾಡುತ್ತಿರಬಹುದು ಎಂದು ಶಂಕಿಸಿ ಆತ ರೇಪ್ ಅನ್ನು (16 year teen) ಚಿತ್ರಿಕರಿಸಲು ಫೋನ್ ಇಟ್ಟಿದ್ದ. ಆದರೆ, ಆ ಫೋನ್‌ನಲ್ಲಿ ತಂದೆ ನಡೆಸಿದ ಅತ್ಯಾಚಾರ ಸೆರೆಯಾಗಿದೆ ಎಂದು ದಿಲ್ಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಸಂತ್ರಸ್ತೆಯ ತಂದೆ ಪೊಲೀಸ್‌ಗೆ ದೂರು ನೀಡಿದ ಬಳಿಕ ಇಡೀ ಘಟನೆ ಬೆಳಕಿಗೆ ಬಂದಿದೆ.
ಏಪ್ರಿಲ್ 20 ಮತ್ತು 30ರ ನಡವೆ ಆರೋಪಿಯ ಮನೆಯಲ್ಲಿ ಈ ಘಟನೆ ನಡೆದಿದೆ. ರೇಪ್ ಮಾಡಿರುವ ಬಗ್ಗೆ ಯಾರಿಗೂ ಹೇಳದಂತೆ ಆರೋಪಿಯು ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಹೆದರಿದ ಬಾಲಕಿ ಈವರೆಗೂ ರೇಪ್ ಆದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ, ರೇಪ್ ಮಾಡಿದ ವಿಡಿಯೋವನ್ನು ಸಂತ್ರಸ್ತೆ ಅಪ್ಪ ನೋಡಿದಾಗಲೇ ಇಡೀ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ ಬಾಲಕಿ.
ಅತ್ಯಾಚಾರ ನಡೆಸಿದ ಆರೋಪಿಯು ಸಂತ್ರಸ್ತೆಯ ಮನೆಯ ಪಕ್ಕದಲ್ಲೇ ವಾಸಿಸುತ್ತಾನೆ. ಆರೋಪಿಯು ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಅಲ್ಲದೇ ಆತನ ಜತೆಗೂಡಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೂಡ ಕೈಗೊಂಡಿರುವುದಾಗಿ ಸಂತ್ರಸ್ತೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಅತ್ಯಾಚಾರ ಘಟನೆ ನಡೆದ ದಿನ, ಸಂತ್ರಸ್ತೆ ಬಾಲಕಿಯು ತನ್ನ ಮನೆಯ ಹೊರಗೆ ನಿಂತಿದ್ದಳು. ಆಕೆಗೆ ಆಮಿಷ ತೋರಿಸಿ, ತನ್ನ ಮನೆಯೊಳಗೇ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಈ ಸುದ್ದಿಯನ್ನೂ ಓದಿ: ಸ್ಯಾಡಿಸ್ಟ್ ಗಂಡ; ಪತ್ನಿ ಮೇಲೆ 51 ಜನರಿಂದ ರೇಪ್ ಮಾಡಿಸಿದ, ಕೈ ತೊಳೆದು ಆಕೆಯನ್ನು ಮುಟ್ಟಿ ಎನ್ನುತ್ತಿದ್ದ!
ಆರೋಪಿಗೆ 40 ವರ್ಷದ ಮಗನಿದ್ದಾನೆ. ತನ್ನ ತಂದೆ ವಾಮಾಚಾರ ಮಾಡುತ್ತಿದ್ದಾನೆಂದು ಆರೋಪಿಸಿ, ಆತನ ರೂಮಿನಲ್ಲಿ ರಹಸ್ಯವಾಗಿ ಕ್ಯಾಮೆರಾ ಫಿಕ್ಸ್ ಮಾಡಿದ್ದ. ಆ ಕ್ಯಾಮೆರಾದಲ್ಲಿ ಈ ಬಾಲಕಿಯನ್ನು ಅತ್ಯಾಚಾರ ನಡೆಸಿದ ದೃಶ್ಯಗಳು ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾದ ಬಳಿಕ, ಆರೋಪಿ ತಂದೆ ಮತ್ತು ಮಗನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಬಳಿಕ ಇಬ್ಬರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಿಲ್ಲಿ ನಾರ್ಥ್ ಡೆಪ್ಯುಟಿ ಪೊಲೀಸ್ ಕಮಿಷನರ್ ಸಾಗರ್ ಸಿಂಗ್ ಕಲ್ಸಿ ಅವರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.