ಪಟನಾ: ಬಿಹಾರದಲ್ಲಿಯೇ ಅತಿ ಹೆಚ್ಚು ನಕ್ಸಲರ ಉಪಟಳ ಇರುವ ಔರಂಗಾಬಾದ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿದ್ದು, 162 ಸುಧಾರಿತ ಸ್ಫೋಟಕ ಸಾಧನಗಳನ್ನು (IED Recovered) ವಶಪಡಿಸಿಕೊಂಡಿದ್ದಾರೆ. ಇದರಿಂದ ಭಾರಿ ಸ್ಫೋಟವೊಂದು ತಪ್ಪಿದಂತಾಗಿದೆ.
“ನಿಖರ ಮಾಹಿತಿ ಮೇರೆಗೆ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಭಾರಿ ಪ್ರಮಾಣದ ಐಇಡಿಗಳ ಜತೆಗೆ ಇನ್ನೂ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ನಕ್ಸಲ್ ನಿಗ್ರಹಕ್ಕೆ ಭದ್ರತಾ ಸಿಬ್ಬಂದಿಯು ಸತತ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಮಾವೋವಾದಿಗಳು ಅಳಿವಿನಂಚಿನಲ್ಲಿದ್ದಾರೆ” ಎಂದು ಸಿಆರ್‌ಪಿಎಫ್ ಪ್ರಕಟಣೆ ತಿಳಿಸಿದೆ.
ಜನವರಿ 27ರಂದು ಕೂಡ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಔರಂಗಾಬಾದ್‌ನ ಲಡುಯಾ ಪಹಾಡ್ ಪ್ರದೇಶದಲ್ಲಿ 13 ಐಇಡಿಗಳನ್ನು ವಶಪಡಿಸಿಕೊಂಡಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಐಇಡಿಗಳು ಪತ್ತೆಯಾದ ಕಾರಣ ಔರಂಗಾಬಾದ್‌ನಲ್ಲಿ ಭಾರಿ ಸ್ಫೋಟಕ್ಕೆ ಮಾವೋವಾದಿಗಳು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Hassan Blast | ಹಾಸನ ಮಿಕ್ಸಿ ಸ್ಫೋಟಕ್ಕೂ, ಉಗ್ರ ಸಂಘಟನೆಗೂ ಸಂಬಂಧ ಇಲ್ಲ: ಎಸ್‌ಪಿ ಹರಿರಾಂ ಶಂಕರ್