ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು 2017ರಲ್ಲಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯಾದ್ಯಂತ ಕ್ರಿಮಿನಲ್‌ಗಳನ್ನು ಮಟ್ಟಹಾಕಲಾಗುತ್ತಿದೆ. ಎನ್‌ಕೌಂಟರ್‌ಗಳು, ಪೊಲೀಸರ ದಾಳಿ, ಕಠಿಣ ಕ್ರಮಗಳಿಂದಾಗಿ ಅಪರಾಧಿಗಳೇ ಪೊಲೀಸ್ ಠಾಣೆಗೆ ತೆರಳಿ ನಮ್ಮನ್ನು ಬಂಧಿಸಿ ಎಂದು ಮನವಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ. ಇದರ ಬೆನ್ನಲ್ಲೇ, “2007ರಿಂದ ಇದುವರೆಗೆ ರಾಜ್ಯಾದ್ಯಂತ 178 ಕ್ರಿಮಿನಲ್‌ಗಳನ್ನು (Criminals KIlled In UP) ಎನ್‌ಕೌಂಟರ್ ಮಾಡಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಕಳೆದ ಆರು ವರ್ಷದಲ್ಲಿ ಸರಾಸರಿ 13 ದಿನಕ್ಕೆ ಒಬ್ಬ ಕ್ರಿಮಿನಲ್‌ನನ್ನು ಹತ್ಯೆ ಮಾಡಲಾಗಿದೆ. 2017ರ ಮಾರ್ಚ್‌ನಿಂದ 2023ರ ಮಾರ್ಚ್ 6ರವರೆಗೆ 23,069 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಇನ್ನು ಎನ್‌ಕೌಂಟರ್‌ಗಳಲ್ಲಿ 4,911 ಜನರನ್ನು ಬಂಧಿಸಲಾಗಿದೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
“ಕ್ರಿಮಿನಲ್‌ಗಳ ಕುರಿತು ಮಾಹಿತಿ ನೀಡಿದರೆ ಸುಮಾರು 75 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾದ ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದೆ. ಇನ್ನು ಎನ್‌ಕೌಂಟರ್‌ಗಳಲ್ಲಿ 15 ಪೊಲೀಸರು ಹುತಾತ್ಮರಾಗಿದ್ದಾರೆ. 1,424 ಪೊಲೀಸರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್