Site icon Vistara News

ರಸ್ತೆ ಇಲ್ಲದ್ದಕ್ಕೆ ಅರ್ಧ ದಾರಿಯಲ್ಲೇ ನಿಂತ ಆಂಬ್ಯುಲೆನ್ಸ್, 6 ಕಿ.ಮೀ ನಡೆದು ಆಸ್ಪತ್ರೆಗೆ ಹೋದ್ರೂ ಬದುಕುಳಿಯಲಿಲ್ಲ ಮಗು

Mother Carrying Child

ನವದೆಹಲಿ: ಹಾವು ಕಚ್ಚಿದ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ವೆಲ್ಲೋರ್ ಜಿಲ್ಲೆಯಲ್ಲಿ (Vellore) ನಡೆದಿದೆ. ಮೃತ ಮಗುವಿಗೆ 18 ತಿಂಗಳಾಗಿತ್ತು (Child Died). ಮಗುವಿಗೆ ಹಾವು ಕಚ್ಚಿದ ಕೂಡಲೇ ಆಸ್ಪತ್ರೆ ಕರೆದುಕೊಂಡು ಹೋಗಲು ಆ್ಯಂಬಲೆನ್ಸ್‌ನಲ್ಲಿ ಬಂದಿದ್ದಾರೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಸರಿಯಾದ ರಸ್ತೆ ಇಲ್ಲದ್ದರಿಂದ ಆ್ಯಂಬುಲೆನ್ಸ್ (ambulance) ಮುಂದೆ ಹೋಗಲು ಸಾಧ್ಯವಾಗಿಲ್ಲ. ಆಗ, ತಾಯಿಯು ಮಗುವನ್ನು ಹೊತ್ತುಕೊಂಡು 6 ಕಿ.ಮೀ ನಡೆದು ಬರುವಷ್ಟರಲ್ಲಿ ಮಗುವ ಮೃತಪಟ್ಟಿದೆ(Snake Bite).

ಮಾಧ್ಯಮಗಳ ವರದಿಗಳ ಪ್ರಕಾರ, ರಸ್ತೆ ಸರಿ ಇಲ್ಲದ ಕಾರಣ ಆ್ಯಂಬುಲೆನ್ಸ್ ಅವರನ್ನು ಮಧ್ಯದಲ್ಲಿ ಬಿಡಬೇಕಾಗಿ ಬಂದ ಕಾರಣ ತಾಯಿ ಮಗುವನ್ನು 6 ಕಿಲೋಮೀಟರ್ ಬೆಟ್ಟವನ್ನು ಹತ್ತಬೇಕಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವನ್ನಪ್ಪಿದೆ. ಈ ಭಾಗದಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದೇ ಮಗು ಸಾಯಲು ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ವೆಲ್ಲೋರ್ ಜಿಲ್ಲಾಧಿಕಾರಿಗಳು ಮಾತ್ರ, ಮಗುವಿನ ತಾಯಿಯು ಒಂದು ವೇಳೆ ಆಶಾ ಕಾರ್ಯಕರ್ತೆಯರನ್ನು ಭೇಟಿಯಾಗಿದ್ದಾರೆ. ನೆರವು ದೊರೆಯುತ್ತಿತ್ತು ಎಂದು ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ವೆಲ್ಲೋರ್ ಜಿಲ್ಲಾಧಿಕಾರಿ, ಬೆಟ್ಟದಾರಿಯಲ್ಲಿ ಸಾಗಲು ಅನುಕೂಲವಾಗ ಮಿನಿ ಆ್ಯಂಬುಲೆನ್ಸ್‌ಗಳಿವೆ. ಒಂದು ವೇಳೆ, ಮಗುವಿನ ಕುಟುಂಬದ ಸದಸ್ಯರು ಆಶಾ ಕಾರ್ಯಕರ್ತರೆಯರಿಗೆ ಮಾಹಿತಿ ನೀಡಿದ್ದರೆ, ಮಗುವಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅವರು ಹಾಗೆ ಮಾಡಲಿಲ್ಲ ಮತ್ತು ಮೋಟಾರ್ ಸೈಕಲ್ ಮೇಲೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Snake Bite: ಮಲಗಿದ್ದಾಗ ಹಾವು ಕಚ್ಚಿ ಬಾಲಕಿ ಸಾವು

ಸುಮಾರು 1,500 ಜನರು ಅಲ್ಲಲ್ಲಿ ವಾಸಿಸುವ ಪ್ರದೇಶಕ್ಕೆ ರಸ್ತೆಯನ್ನು ಹಾಕಲು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಸಂಬಂಧಿತ ಅರ್ಜಿಯನ್ನು ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು, ಮಗುವಿನ ಸಾವಿಗೆ ಡಿಎಂಕೆ ನೇತೃತ್ವದ ಸರ್ಕಾರವೇ ಕಾರಣ. ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version