ನವದೆಹಲಿ: ಸ್ಮಶಾನದಲ್ಲಿ (cremation ground) ಅರೆ ಸುಟ್ಟ ಶವದ ಮಾಂಸವನ್ನು ತಿನ್ನುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರನ್ನು ಒಡಿಶಾ ಪೊಲೀಸರು (Odisha Police) ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದ ಮಯೂರಬಂಜ್ ಜಿಲ್ಲೆಯ ಬನ್ಸಾಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ 58 ವರ್ಷದ ಸಂದರ್ ಮೋಹನ್ ಸಿಂಗ್ ಹಾಗೂ 25 ವರ್ಷದ ನರೇಂದ್ರ ಸಿಂಗ್ ಅವರನ್ನು ದಂತುನಿ ಹಳ್ಳಿಯಿಂದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿಗಳ ವಿರುದ್ಧ ಸೆಕ್ಷನ್ 297 ಮತ್ತು 34ರ ಅಡಿ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬನ್ಸಾಹಿ ಗ್ರಾಮದ ಮಧುಸ್ಮಿತಾ ಸಿಂಗ್ ಎಂಬ 25 ವರ್ಷದ ಮಹಿಳೆ ಮಂಗಳವಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾವು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ. ಬಳಿಕ ಈ ಮಹಿಳೆಯ ಶವಸಂಸ್ಕಾರದ ಸಮಯದಲ್ಲಿ ಇಬ್ಬರು ಕುಡುಕ ಶಂಕಿತರು ಸುಟ್ಟ ಮಾಂಸವನ್ನು ಕದ್ದು ಅದನ್ನು ಸೇವಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ಾರೆ. ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಚಿಕನ್‌ನಲ್ಲಿ ಸಿಕ್ಕಿತು ಸತ್ತ ಇಲಿ; ವಿಡಿಯೊ ವೈರಲ್
ಈ ಇಬ್ಬರ ಕೃತ್ಯ ನೋಡಿದ ಮಹಿಳೆಯ ಸಂಬಂಧಿಕರು ಅವರಿಬ್ಬರನ್ನು ಊರಿನ ಮುಖ್ಯಸ್ಥರ ಬಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಗ್ರಾಮಸ್ಥರು ಅವರಿಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ, ಮನಸೋಚ್ಛೆ ಥಳಿಸಿದ್ದಾರೆ. ಕುಡುಕರಿಬ್ಬರು ತಮ್ಮ ಜತೆಗೆ ಮಹಿಳೆಯ ಶವದ ಮಾಂಸವನ್ನು ತಂದಿದ್ದರು. ಅದನ್ನು ಗ್ರಾಮಸ್ಥರು ರಗ್ಗಿನಲ್ಲಿ ಹಾಕಿ ಸಂಗ್ರಹಿಸಿದ್ದರು. ಈ ಘಟನೆಯು ಸ್ಥಳೀಯರ ತೀವ್ರ ಆತಂಕಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಾನವರ ಮಾಂಸವನ್ನು ಸೇವಿಸಿದ ಆರೋಪದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಪರಿದಾ ಅವರ ಹೇಳಿದ್ದಾರೆ. ಹೀಗಿದ್ದೂ ಆರೋಪಿತರ ಮೈಮೇಲೆ ಯಾವುದೇ ಮಾಂಸದ ತುಣುಕುಗಳು ಇರಲಿಲ್ಲ. ಗ್ರಾಮಸ್ಥರು ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.