ನವದೆಹಲಿ: ಜನವರಿ 26ರಂದು ಆಚರಿಸುವ ಗಣರಾಜ್ಯೋತ್ಸವಕ್ಕೂ ಮುನ್ನವೇ ದೆಹಲಿಯಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಶಂಕಿತರ ಮನೆಯಲ್ಲಿ ಎರಡು ಹ್ಯಾಂಡ್ ಗ್ರೆನೇಡ್ (Grenades Found) ಹಾಗೂ ಮನುಷ್ಯರ ರಕ್ತ ಪತ್ತೆಯಾಗಿದ್ದು, ಪೊಲೀಸರು ಉನ್ನತ ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸ್‌ನ ವಿಶೇಷ ವಿಭಾಗದ ಪೊಲೀಸರು ಗುರುವಾರವೇ ಜಗಜೀತ್ ಸಿಂಗ್ ಹಾಗೂ ನೌಶಾದ್ ಎಂಬ ಶಂಕಿತ ಖಲಿಸ್ತಾನ್ ಉಗ್ರರನ್ನು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣದ ಉನ್ನತ ತನಿಖೆಯ ಭಾಗವಾಗಿ ಪೊಲೀಸರು ಭಾಲಸ್ವ ಡೈರಿ ಪ್ರದೇಶದ ಶ್ರದ್ಧಾನಂದ ಕಾಲೋನಿಯಲ್ಲಿ ಇಬ್ಬರು ಶಂಕಿತರು ವಾಸವಿರುವ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಎರಡು ಹ್ಯಾಂಡ್ ಗ್ರೆನೇಡ್ ಹಾಗೂ ಮನುಷ್ಯರ ರಕ್ತವನ್ನು ಪತ್ತೆ ಹಚ್ಚಿದ್ದಾರೆ. ಇವರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದಾಳಿ ನಡೆಸುವ, ಯಾರನ್ನಾದರೂ ಕೊಂದಿರುವ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Shivamogga terror | ತೀರ್ಥಹಳ್ಳಿಯಲ್ಲಿ ಇ.ಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ