ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಇಬ್ಬರು ಲಷ್ಕರೆ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಹತರಾದ ಭಯೋತ್ಪಾದಕರ ಸಂಖ್ಯೆ 100ಕ್ಕೆ ಏರಿದೆ. ಅವರಲ್ಲಿ 30 ಮಂದಿ ಪಾಕ್ ಮೂಲದವರಾಗಿದ್ದಾರೆ.
ಶೊಪಿಯಾನ್‌ನಲ್ಲಿ ಹತರಾದ ಉಗ್ರರಲ್ಲಿ ಒಬ್ಬಾತ ಇತ್ತೀಚೆಗೆ ನಡೆದ ಬ್ಯಾಂಕ್ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿ ಭಾಗವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಕನಿಷ್ಠ 100 ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ 30 ಮಂದಿ ಪಾಕ್ ಮೂಲದವರು ಮೂಲಗಳು ತಿಳಿಸಿವೆ. ಕಣಿವೆಯಲ್ಲಿ ಉಗ್ರರ ಸಂಹಾರ ನಿರಂತರ ಮುಂದುವರಿದಿದೆ. ಇನ್ನೂ 158 ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಪಾಕಿಸ್ತಾನವು ಒಂದು ಡಜನ್ ಟೆರರ್ ಕ್ಯಾಂಪ್‌ಗಳನ್ನು ಸಕ್ರಿಯಗೊಳಿಸಿದೆ. ಉಗ್ರರು ಅಮರನಾಥ ಯಾತ್ರೆಗೆ ಅಡ್ಡಿ ಮಾಡಲೂ ಹೊಂಚು ಹಾಕಿದ್ದರು.