ಭೋಪಾಲ್: ಭಾರತದಲ್ಲಿ ಚೀತಾ ಸಂತತಿಯ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರವೇನೋ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ತಂದು ಬಿಟ್ಟಿದೆ. ಆದರೆ, ಮತ್ತೆ ಎರಡು ಚೀತಾ ಮರಿಗಳು ಮೃತಪಟ್ಟಿರುವುದು, ದಿನೇದಿನೆ ಚೀತಾಗಳ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವುದು ದೇಶದಲ್ಲಿ ಸಂತತಿಯ ಅಳಿವು-ಉಳಿವಿನ ಪ್ರಶ್ನೆ ಎದ್ದಿದೆ.
ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತಂದ ಚೀತಾಗೆ ಜ್ವಾಲಾ ಎಂದು ಹೆಸರಿಡಲಾಗಿತ್ತು. ಅದು ಮಾರ್ಚ್ 24ರಂದು ನಾಲ್ಕು ಮರಿಗಳಿಗೆ ಜನ್ಮನೀಡಿತ್ತು. ಅವುಗಳಲ್ಲಿ ಈಗ ಎರಡು ಚೀತಾಗಳು ಮೃತಪಟ್ಟಿವೆ. ಮೊದಲೇ ಒಂದು ಮೃತಪಟ್ಟಿತ್ತು. ಉಳಿದ ಒಂದು ಮರಿಯ ಆರೋಗ್ಯ ಕೂಡ ಕ್ಷೀಣವಾಗಿದೆ. ಚೀತಾ ಮರಿಗಳು ಹುಟ್ಟಿನಿಂದಲೇ ಕಡಿಮೆ ತೂಕ ಹೊಂದಿವೆ. ಅಲ್ಲದೆ, ನಿರ್ಜಲೀಕರಣವು ಮೃತಪಟ್ಟ ಎರಡು ಚೀತಾಗಳನ್ನು ಬಾಧಿಸುತ್ತಿತ್ತು. ಹಾಗಾಗಿ, ಅವು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಕೆಲ ದಿನಗಳ ಹಿಂದಷ್ಟೇ ಒಂದು ಚೀತಾ ಮೃತಪಟ್ಟಿತ್ತು. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಮರಿ ಮೃತಪಟ್ಟಿದ್ದು, ಚೀತಾಗಳ ನಡುವಿನ ಸಂಘರ್ಷದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್ನಲ್ಲಿ ಉದಯ್ ಎಂಬ ಚೀತಾ ಮರಣಹೊಂದಿತ್ತು. ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಚೀತಾ ಮೃತಪಟ್ಟಿತ್ತು.
ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭಾರತದಲ್ಲಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಎರಡನೇ ಹಂತದಲ್ಲಿ 12 ತರಲಾಗಿತ್ತು. ಈ ಚೀತಾಗಳನ್ನು ಹಂತಹಂತವಾಗಿ ವಿಶಾಲವಾದ ಕಾಡಿಗೆ ಬಿಡಲಾಗುತ್ತಿದೆ. ಅಂದರೆ ರಾಷ್ಟ್ರೀಯ ಉದ್ಯಾನವನದಲ್ಲಿ, ಸುತ್ತಲೂ ಬೇಲಿಯಿದ್ದ ಜಾಗದಲ್ಲಿ ಸದ್ಯ ಅವುಗಳನ್ನು ಇರಿಸಲಾಗಿತ್ತು, ನಂತರ ಬೇಲಿಯಾಚೆಗಿನ ವಿಶಾಲ ಕಾಡಿಗೆ ಬಿಡಲಾಗುತ್ತದೆ. ಈಗಾಗಲೇ ನಾಲ್ಕು ಚೀತಾಗಳನ್ನು ಹಾಗೆ ಕಾಡಿಗೆ ಬಿಡಲಾಗಿದ್ದು, ಮಾನ್ಸೂನ್ ಒಳಗೆ ಇನ್ನೂ ಐದು ಚೀತಾಗಳನ್ನು ಬಿಡುವುದಾಗಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ತಂದ ಮತ್ತೊಂದು ಚೀತಾ ಸಾವು, ಸಾವಿನ ಸಂಖ್ಯೆ 4; ಹೀಗೆಯೇ ಆದರೆ ಚೀತಾ ಸಂಖ್ಯೆಯೇ ಖಾಲಿ?
ಮುಂಬರುವ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನಷ್ಟು ಚೀತಾಗಳನ್ನು ಮಧ್ಯಪ್ರದೇಶಕ್ಕೆ ತರುವ ಯೋಜನೆ ಇದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಆದರೂ ಇಲ್ಲಿಗೆ ಬಂದ ಚೀತಾಗಳು ಮೃತಪಡುತ್ತಿರುವುದು ಆತಂಕ ತಂದೊಡ್ಡಿದೆ. ಮಾರ್ಚ್ ತಿಂಗಳಲ್ಲಿ ಸಾಶಾ ಕಿಡ್ನಿ ಸೋಂಕಿಗೆ ಒಳಗಾಗಿ, ಅದರಿಂದಲೇ ಮೃತಪಟ್ಟಿತ್ತು. ಜನವರಿಯಿಂದಲೇ ಅದಕ್ಕೆ ಅನಾರೋಗ್ಯ ಕಾಡುತ್ತಿತ್ತು. ಅದಾದ ಮೇಲೆ ಏಪ್ರಿಲ್ನಲ್ಲಿ ಉದಯ್ ಎಂಬ ಚೀತಾ ಕೂಡ ಅಸ್ವಸ್ಥಗೊಂಡಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಇನ್ನು ಸಂಘರ್ಷದಿಂದಲೂ ಚೀತಾಗಳು ಮೃತಪಡುತ್ತಿವೆ.