Site icon Vistara News

Vistara airlines news : ದೆಹಲಿಯಲ್ಲಿ ವಿಸ್ತಾರ ಏರ್​ಲೈನ್ಸ್​ ಹಾಗೂ ಮತ್ತೊಂದು ವಿಮಾನದ ನಡುವೆ ತಪ್ಪಿದ ಅವಘಡ

Vistara Airline

ನವದೆಹಲಿ: ಏಕ ಕಾಲಕ್ಕೆ ಎರಡು ವಿಮಾನಗಳಿಗೆ ಟೇಕ್​ ಆಫ್​ ಮತ್ತು ಲ್ಯಾಂಡಿಂಗ್ (Vistara airlines news)​ ಅನುಮತಿ ನೀಡಿದ್ದರಿಂದ ವಿಮಾನಗಳ ನಡುವೆ ನಡೆಯಬೇಕಾಗಿದ್ದ ಸಂಭವನೀಯ ಅವಘಡ ಕೊನೇ ಕ್ಷಣದಲ್ಲಿ ತಪ್ಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ನೂತನ ಟರ್ಮಿನಲ್​​ನಲ್ಲಿ (Vistara Delhi Incident Today) ಈ ಘಟನೆ ನಡೆದಿದೆ. ಅಧಿಕಾರಿಗಳು ವಿಸ್ತಾರ ಏರ್​ಲೈನ್ಸ್​ (Vistara Airlines) ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ನೀಡಿದ ಬಳಿಕ ಅದರ ಕೊನೇ ಹಂತದ ಜಾರಿಯಲ್ಲಿತ್ತು. ಇದೇ ಸಂದರ್ಭದಲ್ಲಿ ಮತ್ತೊಂದು ವಿಮಾನಕ್ಕೆ ಟೇಕ್​ ಆಫ್​ ​ ಅನುಮತಿ ನೀಡಲಾಗಿದೆ. ಎಟಿಸಿಯ ಕೊನೇ ಕ್ಷಣದ ಸೂಚನೆಯ ನಂತರ ಟೇಕ್ ಆಫ್ ಅನ್ನು ನಿಲ್ಲಿಸಲಾಯಿತು (Major Mishap Averted at Delhi) ಎಂದು ಹೇಳಲಾಗಿದೆ.

ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿದ್ದ ಯುಕೆ 725 ವಿಮಾನವು ಹೊಸದಾಗಿ ಉದ್ಘಾಟಿಸಲಾದ ರನ್ವೇಯಿಂದ ಟೇಕ್ ಆಫ್​ಗೆ ಸಜ್ಜಾಗಿತ್ತು. ಇದೇ ವೇಳೆ ಅಹಮದಾಬಾದ್​ನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರಾ ವಿಮಾನವು ಸಮಾನಾಂತರ ರನ್​ವೇಯಲ್ಲಿ ಇಳಿದು ಕೊನೆಯಲ್ಲಿ (Vistara A320 and A321 crash) ಚಲಿಸುತ್ತಿತ್ತು. ಈ ಅವಧಿಯಲ್ಲಿ ಟೇಕ್​ಆಫ್​​ಗೆ ಅವಕಾಶ ನೀಡಿ ಎಡವಟ್ಟು ಮಾಡಿದದರು. ಅಧಿಕಾರಿಗಳು ಮೊದಲು ಟೇಕ್​ ಆಫ್​​ಗೆ ಅವಕಾಶ ಕೊಟ್ಟು ಬಳಿಕ ಏಕಾಏಕಿ ನಿಲ್ಲಿಸಿದ್ದಾರೆ.

ಎರಡೂ ವಿಮಾನಗಳ ಪೈಲೆಟ್​​ಗಳಿಗೆ ಒಂದೇ ಸಮಯದಲ್ಲಿ ಅನುಮತಿ ನೀಡಲಾಯಿತು ಆದರೆ ಎಟಿಸಿಗೆ ತಕ್ಷಣವೇ ವಿಷಯ ಗಮನಕ್ಕೆ ಬಂತು . ಕರ್ತವ್ಯದಲ್ಲಿದ್ದ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಅಧಿಕಾರಿ ವಿಸ್ತಾರಾ ವಿಮಾನ (Vistara Delhi Flights) ಸಂಚಾರ ನಿಲ್ಲಿಸುವಂತೆ ಸೂಚಿಸಿದರು ಎಂದು ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.

ದೆಹಲಿ-ಬಾಗ್ಡೋಗ್ರಾ ವಿಮಾನವು ಟೇಕ್ ಆಫ್ ಆದ ಬಳಿಕ ರನ್​​ವೇ ಮೂಲಕ ವಿಸ್ತಾರ ವಿಮಾಣ ಪಾರ್ಕಿಂಗ್ ಬೇ ಕಡೆಗೆ ಮರಳಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಗ್ಡೋಗ್ರಾದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಎದುರಾಗಬಹುದು ಎಂಬ ಕಾರಣಕ್ಕೆ ಒಂದು ವೇಳೆ ಲ್ಯಾಂಡಿಂಗ್ ಸಾಧ್ಯವಾಗದೇ ಹೋದರೆ ವಿಮಾನಕ್ಕೆ ಇಂಧನ ತುಂಬಿಸುವ ಕಾರ್ಯಕ್ಕಾಗಿ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಎಟಿಸಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದೇ ಹೋಗಿದ್ದರೆ ದೊಡ್ಡ ಅವಘಡ ಉಂಟಾಗುತ್ತಿತ್ತು. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಪ್ರಕಾರ, ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಬೇರೆ ವಿಮಾನಗಳ ಚಲನೆಗೆ ಅನುಮತಿ ನೀಡಲಾಗುವುದಿಲ್ಲ.

ಎಟಿಸಿಯ ಸೂಚನೆ ಪ್ರಕಾರ ಬಾಗ್ಡೋಗ್ರಾಗೆ ತೆರಳುತ್ತಿದ್ದ ವಿಮಾನದ ಪೈಲಟ್ ವಿಮಾನವು ಟೇಕ್ ಆಫ್ ಆಗುವುದಿಲ್ಲ ತಕ್ಷಣವೇ ಘೋಷಿಸಿದರು. ಇದರಿಂದಾಗಿ ಪ್ರಯಾಣಿಕರು ಸ್ವಲ್ಪ ಕಳವಳಕ್ಕೆ ಒಳಗಾದರು ಎಂದು ಮೂಲಗಳು ತಿಳಿಸಿವೆ.

ಹಿರಿಯ ಪೈಲಟ್ ಮತ್ತು ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್​​ ಸಂಸ್ಥಾಪಕ ಕ್ಯಾಪ್ಟನ್ ಅಮಿತ್ ಸಿಂಗ್ ಈ ಕುರಿತು ಮಾತನಾಡಿ ನಿಕಟ ಸ್ಥಳಾವಕಾಶದ ರನ್​ವೇಗಳಿಂದ ವಿಮಾನ ಕಾರ್ಯಾಚರಣೆಗಳಿಗೆ ಮೇಲ್ವಿಚಾರಣೆ ಮತ್ತು ಎಸ್ಒಪಿಗಳ ಕಟ್ಟುನಿಟ್ಟು ಪಾಲನೆಯ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: Heart Attack : ವಿಮಾನ ಟೇಕ್​ಆಫ್​ಗೆ ಮೊದಲು ಪೈಲೆಟ್​ ಹೃದಯಾಘಾತದಿಂದ ಸಾವು

ಸಾಮಾನ್ಯವಾಗಿ ವಿಮಾನವು ಎರಡನೇ ರನ್ವೇಯಲ್ಲಿ ಇಳಿಯುವಾಗ ಮತ್ತೊಂದು ರನ್​ವೇಯಲ್ಲಿರುವ ವಿಮಾನಕ್ಕೆ ಟೇಕ್ ಆಫ್ ಕ್ಲಿಯರೆನ್ಸ್ ನೀಡಲಾಗುವುದಿಲ್ಲ” ಎಂದು ಅವರು ಹೇಳಿದರು.

ವಿಮಾನವನ್ನು ಒಂದು ರನ್ವೇಯಿಂದ ಟೇಕ್ ಆಫ್ ಮಾಡಲು ಅನುಮತಿ ನೀಡಿದರೆ ಮತ್ತು ಎರಡನೇ ರನ್​ವೇಯಲ್ಲಿ ಲ್ಯಾಂಡಿಂಗ್​ ಆಗಲು ನಿರ್ಧರಿಸಿದರೆ ಗಾಳಿಯಲ್ಲಿ ಎರಡು ವಿಮಾನಗಳ ಹಾರಾಟದ ಮಾರ್ಗವು ಸಂಘರ್ಷಕ್ಕೆ ಒಳಗಾಗಬಹುದ ಎಂದು ಅವರು ಹೇಳಿದ್ದಾರೆ.

Exit mobile version