ನವದೆಹಲಿ: ನಮ್ಮ ಸೈನಿಕರ ಶವಗಳ ಮೇಲೆ 2019ರ ಲೋಕಸಭೆ ಚುನಾವಣೆ ನಡೆಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satyapal Malik) ಪುನರುಚ್ಚರಿಸಿದ್ದಾರೆ. ಪುಲ್ವಾಮಾ ದಾಳಿಯ (Pulwama attack) ಕುರಿತು ಸೂಕ್ತ ತನಿಖೆಯಾಗಿದ್ದರೆ ಅಂದಿನ ಗೃಹ ಸಚಿವರು (ರಾಜನಾಥ ಸಿಂಗ್) ರಾಜೀನಾಮೆ ನೀಡಬೇಕಾಗುತ್ತಿತ್ತು ಎಂದು ಅವರು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪುಲ್ವಾಮಾ ದಾಳಿಯ ಬಗ್ಗೆ ತಾವು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗಮನಕ್ಕೆ ತಂದರೂ, ತಮ್ಮನ್ನು ಸುಮ್ಮನಿರಿಸಲಾಯಿತು ಎಂದು ಸತ್ಯಪಾಲ್ ಮಲಿಕ್ ಅವರು ಹೇಳಿಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆ ನಮ್ಮ ಸೈನಿಕರ ದೇಹದ ಮೇಲೆ ಹೋರಾಡಲಾಯಿತು ಮತ್ತು ಯಾವುದೇ ತನಿಖೆ ನಡೆಸಲಿಲ್ಲ. ಒಂದು ವೇಳೆ ತನಿಖೆ ನಡೆದಿದ್ದರೆ ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆ ನೀಡಬೇಕಿತ್ತು. ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು ಮತ್ತು ದೊಡ್ಡ ವಿವಾದ ಉಂಟಾಗುತ್ತಿತ್ತು ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಸತ್ಯಪಾಲ್ ಮಲಿಕ್ ಅವರು, ಕಣಿವೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳಾಗಿ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂದಲ ಅಖಂಡ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಾರೆ.
2019ರ ಫೆಬ್ರವರಿ 14, ಭಾನವಾರ ಪುಲ್ವಾಮಾ ದಾಳಿ ನೆಡಯಿತು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರಿಕರಣಕ್ಕಾಗಿ ಚಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿದ್ದರು. ಅಲ್ಲಿಂದ ಅವರು ಬಂದ ಮೇಲೆ ನನಗೆ ಕರೆ ಮಾಡಿದರು. ನಮ್ಮ ಸೈನಿಕರು ಬಲಿಯಾಗಿದ್ದಾರೆ. ನಮ್ಮ ತಪ್ಪಿನಿಂದಾಗಿ ಅವರು ಬಲಿಯಾಗುವಂತಾಯಿತು ಎಂದು ಹೇಳಿದೆ. ಆದರೆ, ಅವರು ಈ ಬಗ್ಗೆ ಮಾತನಾಡಬೇಡಿ, ಸುಮ್ಮನಿರುವಂತೆ ಸೂಚಿಸಿದರು ಎಂದು ಸತ್ಯಪಾಲ್ ಮಲಿಕ್ ಅವರು ಹೇಳಿದರು.
ಇದನ್ನೂ ಓದಿ: Amit Shah: ಪುಲ್ವಾಮಾ ದಾಳಿ ಬಗ್ಗೆ ಸತ್ಯಪಾಲ್ ಮಲಿಕ್ ಹೇಳಿದ್ದು ನಿಜವೇ ಆಗಿದ್ದರೆ..; ಅಮಿತ್ ಶಾ ಕೇಳಿದ ಪ್ರಶ್ನೆ ಏನು?
ಅದಾನಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸತ್ಯಪಾಲ್ ಮಲಿಕ್ ಅವರು ತೀವ್ರ ಟೀಕೆ ಮಾಡಿದ್ದಾರೆ. ಅದಾನಿ ಕೇವಲ ಮೂರು ವರ್ಷಗಳಲ್ಲಿ ಹೆಚ್ಚು ಸಂಪತ್ತನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಅದಾನಿ ಅವರಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ. ಆ, ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರವನ್ನೇ ನೀಡಿಲ್ಲ. ಅವರು (ಮೋದಿ) ಎರಡು ದಿನಗಳ ಕಾಲ ಮಾತನಾಡಿದರೂ, ಪ್ರಶ್ನೆಗೆ ಉತ್ತರಿಸಲಿಲ್ಲ. ಯಾಕೆಂದರೆ ಅವರ ಬಳಿ ಉತ್ತರವೇ ಇರಲಿಲ್ಲ. ನಾನು ನಿಮಗೆ ಹೇಳುತ್ತೇನೆ ಅದೆಲ್ಲವೂ ಅವರ (ಮೋದಿ) ಹಣವಾಗಿದೆ ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.