Site icon Vistara News

Ujjain Shiv Jyoti Arpanam 2023 : ಮಧ್ಯಪ್ರದೇಶದಲ್ಲಿ ಮಹಾ ಶಿವರಾತ್ರಿಗೆ 21 ಲಕ್ಷ ದೀಪ ಬೆಳಗಿ ಗಿನ್ನಿಸ್ ವಿಶ್ವ ದಾಖಲೆ

ujjain

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶನಿವಾರ ಮಹಾ ಶಿವರಾತ್ರಿಯ ಸಂದರ್ಭ 21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಲಾಯಿತು. (Ujjain Shiv Jyoti Arpanam 2023) ಶಿವ ಜ್ಯೋತಿ ಅರ್ಪಣಮ್‌ -2023 ಎಂಬ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಳೆದ ವರ್ಷ 11 ಲಕ್ಷ ಹಣತೆಗಳನ್ನು ಬೆಳಗಿ ಮಹಾ ಶಿವನ ಆರಾಧನೆ ನಡೆಸಲಾಗಿತ್ತು. ಸುಮಾರು 22,000 ಸ್ವಯಂಸೇವಕರು ಈ ವಿಶ್ವದಾಖಲೆಯನ್ನು ಸೃಷ್ಟಿಸಿದರು. ಈ ಹಿಂದೆ ಅಯೋಧ್ಯೆ ದೀಪೋತ್ಸವ 2022 ವೇಳೆ 15.67 ಲಕ್ಷ ಹಣತೆಗಳನ್ನು ಬೆಳಗಲಾಗಿತ್ತು. ಅತ್ಯಾಕರ್ಷಕ ಲೇಸರ್‌ ಶೋ ಅನ್ನು ಕೂಡ ಆಯೋಜಿಸಲಾಗಿತ್ತು. ಸಿಡಿಮದ್ದುಗಳ ಪ್ರದರ್ಶನ ನಡೆಯಿತು.

ಮಹಾ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. 12 ಶಿವರಾತ್ರಿಗಳ ಪೈಕಿ ಮಹಾ ಶಿವರಾತ್ರಿ ಪ್ರಧಾನವಾಗಿ ಆಚರಿಸಲಾಗುತ್ತಿದೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಕೂಡ ಭಕ್ತರ ದಂಡೇ ಆಗಮಿಸಿತ್ತು. ವಿಶ್ವನಾಥನ ದರ್ಶನ ಪಡೆದು ಭಕ್ತರು ಪುನೀತರಾದರು. ವಿಶೇಷ ಪೂಜೆ, ಪ್ರಾರ್ಥನೆ, ಜಾಗರಣೆ ನಡೆಯಿತು.

Exit mobile version