Site icon Vistara News

Soldiers Name To Islands | ಅಂಡಮಾನ್‌ನ 21 ದ್ವೀಪಗಳಿಗೆ ವೀರ ಯೋಧರ ಹೆಸರಿಟ್ಟ ಕೇಂದ್ರ ಸರ್ಕಾರ

Soldiers Name To Islands

ನವದೆಹಲಿ: ಸೇನೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿ ಅತ್ಯುನ್ನತ ಪರಮವೀರ ಚಕ್ರ ಪಡೆದ ವೀರ ಯೋಧರಿಗೆ ಕೇಂದ್ರ ಸರ್ಕಾರವು ವಿಶಿಷ್ಟ ಗೌರವ ಸಲ್ಲಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ ಮತ್ತು ನಿಕೋಬಾರ್‌ನ ೨೧ ಜನವಸತಿರಹಿತ ೨೧ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತ ಯೋಧರ (Soldiers Name To Islands) ಹೆಸರಿಟ್ಟಿದೆ. ಕಾರ್ಗಿಲ್‌ ಯುದ್ಧದ ಹೀರೊ ಕ್ಯಾಪ್ಟನ್ ವಿಕ್ರಮ್‌ ಬಾತ್ರಾ ಅವರ ಹೆಸರೂ ಇದೆ.

ಉತ್ತರ ಹಾಗೂ ಮಧ್ಯ ಅಂಡಮಾನ್‌ ಜಿಲ್ಲೆಯ ೧೬ ಹಾಗೂ ದಕ್ಷಿಣ ಅಂಡಮಾನ್‌ನ ೫ ದ್ವೀಪಗಳಿಗೆ ವೀರ ಯೋಧರ ಹೆಸರಿಡಲು ತೀರ್ಮಾನಿಸಿದೆ. ಇನ್ನು ಕೇಂದ್ರ ಸರ್ಕಾರದ ತೀರ್ಮಾನವನ್ನು ಅಂಡಮಾನ್‌ ಮತ್ತು ನಿಕೋಬಾರ್‌ ಸಂಸದ ಕುಲದೀಪ್‌ ರಾಯ್‌ ಶರ್ಮಾ ಸ್ವಾಗತಿಸಿದ್ದಾರೆ. “ದೇಶದ ವೀರ ಯೋಧರಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಕೇಂದ್ರಾಡಳಿತ ಪ್ರದೇಶದ ೨೧ ದ್ವೀಪಗಳನ್ನು ಆಯ್ಕೆ ಮಾಡಿ, ಅವರಿಗೆ ಯೋಧರ ಹೆಸಟ್ಟಿರುವುದು ಖುಷಿಯ ವಿಚಾರ” ಎಂದಿದ್ದಾರೆ.

ಯಾವ ದ್ವೀಪಕ್ಕೆ ಯಾವ ಯೋಧರ ಹೆಸರು?

೧೯೪೭ರಲ್ಲಿ ಶ್ರೀನಗರದ ವಿಮಾನ ನಿಲ್ದಾಣದ ಬಳಿ ನುಸುಳುಕೋರರ ಗುಂಡಿಗೆ ಹುತಾತ್ಮನಾದ, ಹುತಾತ್ಮನಾಗುವ ಮೊದಲು ಶೌರ್ಯ ಮೆರೆದ ಸೋಮನಾಥ ಶರ್ಮಾ ಅವರ ಹೆಸರನ್ನು ಐಎನ್‌ಎಎನ್‌ ೩೭೦ (INAN370) ದ್ವೀಪಕ್ಕೆ ಇಡಲಾಗಿದೆ. ಇದನ್ನು ಇನ್ನು ‘ಸೋಮನಾಥ ದ್ವೀಪ’ ಎಂದು ಕರೆಯಲಾಗುತ್ತದೆ.

ಹಾಗೆಯೇ, ೧೯೪೭ರಲ್ಲಿ ಭಾರತ-ಪಾಕ್‌ ಯುದ್ಧದಲ್ಲಿ ಶೌರ್ಯ ಮೆರೆದ ಕ್ಯಾಪ್ಟನ್‌ ಕರಮ್‌ ಸಿಂಗ್‌ ಅವರ ಹೆಸರನ್ನು ಐಎನ್‌ಎಎನ್‌೩೦೮ ದ್ವೀಪಕ್ಕೆ ಇಡಲಾಗಿದೆ. ಹಾಗೆಯೇ, ಮೇಜರ್‌ ರಾಮ ರಘೋಬಾ ರಾಣೆ, ನಾಯಕ್‌ ಜದುನಾಥ್‌ ಸಿಂಗ್‌, ಕಂಪನಿ ಹವಿಲ್ದಾರ್‌ ಮೇಜರ್‌ ಪಿರು ಸಿಂಗ್‌ ಶೇಖಾವತ್‌, ಕಾರ್ಗಿಲ್‌ ಯುದ್ಧದ ಹೀರೊ ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ, ಕ್ಯಾಪ್ಟನ್‌ ಮನೋಜ್‌ ಕುಮಾರ್‌ ಪಾಂಡೆ, ಸುಬೇದಾರ್‌ ಮೇಜರ್‌ ಸಂಜಯ್‌ ಕುಮಾರ್‌ ಸೇರಿ ಹಲವು ಯೋಧರ ಹೆಸರನ್ನು ದ್ವೀಪಗಳಿಗೆ ಇಡಲಾಗಿದೆ. ಇವರೆಲ್ಲರೂ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇದನ್ನೂ ಓದಿ | Pak Terrorist | ಭಾರತದ ಯೋಧರು ರಕ್ತ ಕೊಟ್ಟು ಉಳಿಸಿದ್ದ ಪಾಕಿಸ್ತಾನದ ಉಗ್ರ ಹೃದಯಾಘಾತದಿಂದ ಸಾವು!

Exit mobile version