Site icon Vistara News

Rahul Gandhi | 21ನೇ ಶತಮಾನದ ಕೌರವರು ಖಾಕಿ ಚಡ್ಡಿ ಧರಿಸುತ್ತಾರೆ: ಆರ್‌ಎಸ್‌ಎಸ್‌ ಮೇಲೆ ರಾಹುಲ್ ಮತ್ತೆ ವಾಗ್ದಾಳಿ

Congress Leader Rahul Gandhi to address British Parliament

ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಆರೆಸ್ಸೆಸ್‌ನವರನ್ನು 21ನೇ ಶತಮಾನದ ಕೌರವರು ಎಂದು ವಾಗ್ದಾಳಿ ನಡೆಸಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿರುವ ರಾಹುಲ್, ದಾರಿ ಮಧ್ಯ ಜನರನ್ನು ಉದ್ದೇಶಿಸಿ ಮಾತನಾಡಿದರು. ಮಹಾಭಾರತದ ಭೂಮಿಯಾಗಿರುವ ಹರ್ಯಾಣದಲ್ಲಿ ಆರೆಸ್ಸೆಸ್‌ನವರನ್ನು ಕೌರವವರೊಂದಿಗೆ ಹೋಲಿಕೆ ಮಾಡಿ ಟೀಕಿಸಿದರು.

ಯಾರು ಕೌರವರು? ನಾನು ನಿಮಗೆ ಮೊದಲು 21ನೇ ಶತಮಾನದ ಕೌರವರ ಬಗ್ಗೆ ಹೇಳುವೆ. ಅವರು ಖಾಕಿ ಚಡ್ಡಿ ಧರಿಸುತ್ತಾರೆ, ಕೈಯಲ್ಲಿ ಲಾಠಿಯನ್ನು ಹಿಡಿದಿರುತ್ತಾರೆ ಮತ್ತು ಶಾಖಾ ನಡೆಸುತ್ತಾರೆ. ಭಾರತದ ಎರಡ್ಮೂರು ಶತಕೋಟ್ಯಧೀಶರು ಈ ಕೌರವರ ಜತೆಗಿದ್ದಾರೆ ಎಂದು ಟೀಕಿಸಿದರು.

ಪಾಂಡವರು ನೋಟು ಅಮಾನ್ಯ ಮಾಡಿದರೆ? ದೋಷಪೂರಿತ ಜಿಎಸ್‌ಟಿ ಜಾರಿಗೆ ತಂದರೇ? ಅವರು ಯಾವತ್ತಾದರೂ ಹಾಗೆ ಮಾಡಲು ಸಾಧ್ಯವೇ? ಖಂಡಿತ ಇಲ್ಲವೇ ಇಲ್ಲ. ಯಾಕೆಂದರೆ, ಅವರ ತಪಸ್ವಿಗಳು ಮತ್ತು ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿ, ಕೃಷಿ ಕಾನೂನುಗಳು ಈ ನೆಲದ ತಪಸ್ವಿಗಳಿಂದ ಕದಿಯುವ ಮಾರ್ಗವೆಂದು ಅವರಿಗೆ ತಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ಆದರೆ ನೀವು ಒಪ್ಪಲಿ ಅಥವಾ ಇಲ್ಲದಿರಲಿ ಭಾರತದ 2-3 ಶತಕೋಟ್ಯಧೀಶರಗಳ ಶಕ್ತಿ ಇದರ ಹಿಂದೆ ಇತ್ತು ಎಂದು ರಾಹುಲ್ ಹೇಳಿದರು.

ಇದನ್ನೂ ಓದಿ | Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

Exit mobile version