Site icon Vistara News

Sikkim Flash Flood: ಸಿಕ್ಕಿಂನಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ; 23 ಯೋಧರು ನಾಪತ್ತೆ

Flash Flood In Sikkim

23 Army Personnel Missing After Cloudburst Triggers Flash Flood in Sikkim

ಗ್ಯಾಂಗ್‌ಟಾಕ್‌: ಉತ್ತರ ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿದ್ದು (Sikkim Flash Flood), ನದಿಗಳು ಉಕ್ಕಿ ಹರಿಯುತ್ತಿವೆ. ಅಷ್ಟೇ ಅಲ್ಲ, ಭಾರತೀಯ ಸೇನೆಯ 23 ಯೋಧರು (Indian Army Jawans) ನಾಪತ್ತೆಯಾಗಿದ್ದು, ಹಲವು ನಗರಗಳು ಮುಳುಗಿಹೋಗಿವೆ ಎಂದು ತಿಳಿದುಬಂದಿದೆ. ಆದಾಗ್ಯೂ, ನಾಪತ್ತೆಯಾಗಿರುವ ಯೋಧರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಾಚೆನ್‌ ಕಣಿವೆಯಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ತೀಸ್ತಾ ನದಿಯು ಅಪಾಯದ ಮಟ್ಟ ಮೀರಿ ಹರಿದಿದೆ. ಅಷ್ಟೇ ಅಲ್ಲ, ನದಿಯ ನೀರು ದಿಢೀರನೆ ಸೇನೆಯ ನೆಲೆಗೆ ನುಗ್ಗಿದ ಕಾರಣ 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬರ್ದಾಂಗ್‌ನಲ್ಲಿ ನಿಲ್ಲಿಸಿದ್ದ ಸೇನೆಯ ವಾಹನಗಳು ಕೂಡ ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ.

ಲ್ಹೋನಕ್‌ ಕೆರೆಯ ಬಳಿಯು ಮೇಘಸ್ಫೋಟ ಸಂಭವಿಸಿ ಎಲ್ಲೆಂದರಲ್ಲ ನೀರು ನುಗ್ಗಿದೆ. ನಾಪತ್ತೆಯಾಗಿರುವ ಯೋಧರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಪ್ರವಾಹದ ತೀವ್ರತೆಗೆ ಉತ್ತರ ಸಿಕ್ಕಿಂನ ಹಲವು ಭಾಗಗಳಲ್ಲಿ ಮನೆಗಳು ಮುಳುಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಕಾರು, ಬೈಕ್‌ಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.

ಪ್ರವಾಹದ ಭೀಕರತೆ

ಸೇತುವೆಗಳು ಕುಸಿದು, ರಸ್ತೆಗಳು ಕೊಚ್ಚಿಹೋದ ಕಾರಣ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿದುಹೋಗಿದೆ. ಅಷ್ಟೇ ಅಲ್ಲ, ಸಾವಿರಾರು ಜನ ಪ್ರವಾಹದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಕೆಲವೆಡೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ಕೂಡ ಮೂಲಗಳು ತಿಳಿಸಿವೆ. ಚುಂಗ್‌ಥಾಂಗ್‌ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದು ಕೂಡ ಪ್ರವಾಹಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Cloud Burst: ಹಿಮಾಚಲದ ಮೇಘಸ್ಫೋಟಕ್ಕೆ 50 ಸಾವು, ಪ್ರವಾಹದಲ್ಲಿ ಕೊಚ್ಚಿ ಹೋದ 7 ಮಂದಿ!

Exit mobile version