Site icon Vistara News

NITI Aayog: 9 ವರ್ಷದಲ್ಲಿ 24.82 ಕೋಟಿ ಭಾರತೀಯರು ಬಡತನದಿಂದ ಪಾರು! ನೀತಿ ಆಯೋಗದ ವರದಿಯಲ್ಲಿ ಏನಿದೆ?

24.82 cr Indians escaped multidimensional poverty Says NITI Aayog

ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 24.82 ಕೋಟಿ ಜನರು ಬಹುಆಯಾಮದ ಬಡತನದಿಂದ (multidimensional poverty) ಪಾರಾಗಿದ್ದಾರೆ ಎಂದು ನೀತಿ ಆಯೋಗವು ಹೇಳಿದೆ(NITI Aayog). ಉತ್ತರ ಪ್ರದೇಶ(Uttar Pradesh), ಬಿಹಾರ (Bihar) ಮತ್ತು ಮಧ್ಯಪ್ರದೇಶದಲ್ಲಿ (Madhya Pradesh) ಹೆಚ್ಚಿನ ಪ್ರಮಾಣದಲ್ಲಿ ಜನರು ಬಡತನದಿಂದ ಆಚೆ ಬಂದಿದ್ದಾರೆ ಎಂದು ನೀತಿ ಆಯೋಗವು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟಗಳನ್ನು ಸೇರಿದ ಬಹು ಆಯಾಮದ ಬಡತನವನ್ನು ಲೆಕ್ಕ ಹಾಕಲಾಗುತ್ತದೆ.

ಭಾರತದಲ್ಲಿ 2005-06ರಿಂದ ಬಹುಆಯಾಮ ಬಡತನ ಶೀರ್ಷಿಕೆಯ ವರದಿಯಲ್ಲಿ ನೀತಿ ಆಯೋಗವು ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಭಾರತದಲ್ಲಿ ಬಹುಆಯಾಮದ ಬಡತನವು 2013-14ರಿಂದ 2022-23ರ ಅವಧಿಯಲ್ಲಿ 29.17% ರಿಂದ 11.28% ಕ್ಕೆ ಇಳಿದಿದೆ. ಹಾಗೂ 243.82 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ತಿಳಿಸಲಾಗಿದೆ.

ಉತ್ತರ ಪ್ರದೇಶವು ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗುವುದರೊಂದಿಗೆ ಬಡವರ ಸಂಖ್ಯೆಯಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ. ನಂತರ ಸ್ಥಾನದಲ್ಲಿ ಬಿಹಾರ ಇದ್ದು, 3.77 ಕೋಟಿ, ಮಧ್ಯಪ್ರದೇಶ 2.30 ಕೋಟಿ ಮತ್ತು ರಾಜಸ್ಥಾನ 1.87 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ.

2005-06 ರಿಂದ 2015-16 ಕ್ಕೆ ಹೋಲಿಸಿದರೆ 2015-16 ರಿಂದ 2019-21 (10.66% ವಾರ್ಷಿಕ ದರ ಕುಸಿತ) ಘಾತೀಯ ವಿಧಾನವನ್ನು ಬಳಸಿಕೊಂಡು ಬಡತನದ ಜನರ ಅನುಪಾತದಲ್ಲಿನ ಕುಸಿತದ ವೇಗವು ಅತಿ ಹೆಚ್ಚಾಗಿದೆ. ವರ್ಷಕ್ಕೆ ಶೇ.7.69 ಪ್ರಮಾಣದಲ್ಲಿ ಬಡತನವು ಕುಸಿತ ಕಂಡಿದೆ.

ಎಂಪಿಐನ ಎಲ್ಲಾ 12 ಸೂಚಕಗಳು ಸಂಪೂರ್ಣ ಅಧ್ಯಯನದ ಅವಧಿಯಲ್ಲಿ ಗಮನಾರ್ಹ ಸುಧಾರಣೆಯನ್ನು ದಾಖಲಿಸಿವೆ. ಪ್ರಸ್ತುತ ಸನ್ನಿವೇಶಕ್ಕೆ ವಿರುದ್ಧವಾಗಿ 2013-14ರ ಬಡತನದ ಮಟ್ಟವನ್ನು ನಿರ್ಣಯಿಸಲು (ಅಂದರೆ 2022-23 ವರ್ಷಕ್ಕೆ), ಈ ನಿರ್ದಿಷ್ಟ ಅವಧಿಗಳಿಗೆ ಡೇಟಾ ಮಿತಿಗಳ ಕಾರಣದಿಂದಾಗಿ ಯೋಜಿತ ಅಂದಾಜುಗಳನ್ನು ಬಳಸಲಾಗಿದೆ ಎಂದು ನೀತಿ ಆಯೋಗ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?

Exit mobile version