Site icon Vistara News

Murder Case : ಪ್ರೀತಿ ನಿರಾಕರಿಸಿದ 25 ವರ್ಷದ ಯುವತಿಯನ್ನು ಕಟ್ಟಿ ಹಾಕಿ ಸುಟ್ಟ ಪಾಗಲ್ ಪ್ರೇಮಿ

Murder Case

ಚೆನ್ನೈ: ತನ್ನ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ 25 ವರ್ಷದ ಯುವತಿಯೊಬ್ಬಳನ್ನು ಕಟ್ಟಿಹಾಕಿ ಸುಟ್ಟು ಕೊಂದಿರುವ ಪ್ರಕರಣ (Murder Case) ಶನಿವಾರ ರಾತ್ರಿ ಪೊನ್ಮಾರ್ ಬಳಿ ನಡೆದಿದೆ. ಘಟನೆಯಲ್ಲಿ ತೃತಿಯ ಲಿಂಗಿ ವೆಟ್ರಿ ಎಂಬುವರನ್ನು ಬಂಧಿಸಲಾಗಿದೆ. ತಲಂಬೂರ್ ಪೊಲೀಸರು ಭಾನುವಾರ ಮುಂಜಾನೆ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಮೃತ ಯುವತಿಯನ್ನು ಮಧುರೈ ಮೂಲದ ನಂದಿನಿ (25) ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ಪೆರುಂಗುಡಿಯ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಂದನಿ ಮಧುರೈನಲ್ಲಿ ಓದುತ್ತಿದ್ದಾಗ ಆರೋಪಿಯೊಂದಿಗೆ ಗೆಳೆತನ ಹೊಂದಿದ್ದರು. ಇವರಿಬ್ಬರು ಕೆಲಸಕ್ಕಾಗಿ ಚೆನ್ನೈಗೆ ಬಂದಿದ್ದರು. ಕೆಲವು ತಿಂಗಳ ಹಿಂದೆ, ವೆಟ್ರಿ ತನ್ನ ಲಿಂಗ ಗುರುತನ್ನು ನಂದಿನಿಗೆ ತಿಳಿಸಿ ಪ್ರೀತಿ ನಿವೇದನೆ ಮಾಡಿದ್ದ. ಈ ವೇಳೆ ನಂದಿನಿ ಅವನನ್ನು ತಿರಸ್ಕರಿಸಿದ್ದಳು.

ಇದನ್ನೂ ಓದಿ : Car Accident: ಎರಡು ಕಾರು ಡಿಕ್ಕಿಯಾಗಿ ಐವರ ದುರ್ಮರಣ, ಇಬ್ಬರ ಸ್ಥಿತಿ ಗಂಭೀರ

ಆರು ತಿಂಗಳ ಹಿಂದೆ ನಂದಿನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದಳು. ಕೋಪಗೊಂಡ ವೆಟ್ರಿ ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದ. ಶನಿವಾರ, ನಂದಿನಿಯ ಹುಟ್ಟುಹಬ್ಬವಾಗಿತ್ತು. ಅಂದು ಸರ್​ಪ್ರೈಸ್​ ಎಂದು ಹೇಳಿ ಅವಳನ್ನು ವೆಟ್ರಿ ಹೊರಗೆ ಕರೆದೊಯ್ದಿದ. ನಂತರ ಅವನು ಪೊನ್ಮಾರ್ ಬಳಿಯ ಖಾಲಿ ಜಾಗದಲ್ಲಿ ಕಟ್ಟಿಹಾಕಿ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸರು ಶನಿವಾರ ರಾತ್ರಿ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಭಾನುವಾರ ಬೆಳಿಗ್ಗೆ ವೆಟ್ರಿಯನ್ನು ಬಂಧಿಸಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ.

ಹಾಸ್ಟೆಲ್‌ನ ಬಾತ್‌ ರೂಂನಲ್ಲಿ ನೇಣು ಬಿಗಿದುಕೊಂಡ ವಿದ್ಯಾರ್ಥಿ

ಮಂಗಳೂರು: ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನೋಜ್ (18) ಆತ್ಮಹತ್ಯೆ ಮಾಡಿಕೊಂಡವನು.

ಆಳ್ವಾಸ್ ಸಂಸ್ಥೆ ಹಾಸ್ಟೆಲ್‌ನ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತರ್ಚಿಹಾಳದ ಮಲ್ಲಪ್ಪ ಎಂಬುವವರ ಮಗ ಮನೋಜ್‌ ಮೂಡಬಿದ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ವಿಷಯ ತಿಳಿಯುತ್ತಿದ್ದಂತೆ ಹಾಸ್ಟೆಲ್‌ಗೆ ಪೋಷಕರು ದೌಡಾಯಿಸಿದ್ದು, ಘಟನಾ ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಹೊರ ತೆಗೆಯದಂತೆ ಪಟ್ಟು ಹಿಡಿದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮನೋಜ್‌ ಪೋಷಕರು ಸೂಕ್ತ ತನಿಖೆ ನಡೆಸುವಂತೆ ಮೂಡಬಿದ್ರೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version