Site icon Vistara News

NGT | ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿದ್ದಕ್ಕೆ ಕರ್ನಾಟಕಕ್ಕೆ ಎನ್‌ಜಿಟಿಯಿಂದ 2,900 ಕೋಟಿ ರೂ. ದಂಡ

NGT

ನವ ದೆಹಲಿ: ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿದ್ದಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (National Green Tribunal-NGT) 2,900 ಕೋಟಿ ರೂ. ದಂಡ ವಿಧಿಸಿದೆ.

ತ್ಯಾಜ್ಯಗಳನ್ನು ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ಎಂದು ವರ್ಗೀಕರಿಸದೆ ಪರಿಸರಕ್ಕೆ ಹಾನಿ ಉಂಟು ಮಾಡಿರುವ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿರುವ ಎನ್‌ಜಿಟಿ, ಪರಿಸರ ಮಾಲಿನ್ಯವನ್ನು ಪರಿಗಣಿಸಿ ರಾಜ್ಯಕ್ಕೆ 2,900 ಕೋಟಿ ರೂ.ಗಳನ್ನು ದಂಡವಾಗಿ ನೀಡಲು ಆದೇಶಿಸಿದೆ. ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಾಧೀಕರಣ ಪೀಠ ಈ ಆದೇಶ ಹೊರಡಿಸಿದೆ.

ಎರಡು ತಿಂಗಳಿನೊಳಗೆ 2,900 ಕೋಟಿ ರೂ.ಗಳನ್ನು ಪಾವತಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಎನ್‌ಜಿಟಿ ಸೂಚಿಸಿದೆ. ಈ ಹಣವನ್ನು ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಆರು ತಿಂಗಳಿನೊಳಗೆ ಬಳಸಬೇಕಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಯೋಜನೆಯ ಉಸ್ತುವಾರಿಯನ್ನು ಎಂದು ತಿಳಿಸಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಎನ್‌ಜಿಟಿಯು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಮೇಲೆ ನಿಗಾ ವಹಿಸುತ್ತದೆ. ನಿಬಂಧನೆಗಳನ್ನು ಉಲ್ಲಂಘಿಸುವ ರಾಜ್ಯಗಳಿಂದ ನಷ್ಟ ಪರಿಹಾರದ ರೂಪದಲ್ಲಿ ದಂಡ ವಿಧಿಸಿ ಸಂಗ್ರಹಿಸಲಾಗುತ್ತದೆ. ಬಳಿಕ ಅದನ್ನು ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಬಳಸಲಾಗುತ್ತದೆ.

Exit mobile version