Site icon Vistara News

Narendra Modi: ಮೋದಿ ಕಾರಿನ ಎದುರು ಜಿಗಿದ ಮಹಿಳೆ; ಮೂವರು ಪೊಲೀಸರ ಅಮಾನತು!

Modi Road Show In Jharkhand

3 Cops Suspended Over Lapse In PM Narenda Modi's Security During Jharkhand Visit

ರಾಂಚಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಯಾವುದೇ ಮೂಲೆಗೆ ಹೋದರೂ ಬಿಗಿಭದ್ರತೆ ಒದಗಿಸಲಾಗುತ್ತದೆ. ಆದರೆ, ನರೇಂದ್ರ ಮೋದಿ ಅವರು ಬುಧವಾರ (ನವೆಂಬರ್‌ 16) ಜಾರ್ಖಂಡ್‌ನ ರಾಂಚಿಯಲ್ಲಿ ಮೋದಿ ಅವರು ತೆರಳುತ್ತಿದ್ದ ವಾಹನದ ಎದುರು ಮಹಿಳೆಯೊಬ್ಬರು ಅಡ್ಡ ಬಂದು ನಿಂತಿದ್ದಾರೆ. ಆ ಮೂಲಕ ಭದ್ರತಾ (Security Lapse) ಲೋಪವುಂಟಾಗಿದ್ದು, ಮೂವರು ಪೊಲೀಸರು ಅಮಾನತುಗೊಳಿಸಲಾಗಿದೆ.

ನರೇಂದ್ರ ಮೋದಿ ಅವರು ಭಗವಾನ್‌ ಬಿಸ್ರಾ ಮುಂಡಾ ಮೆಮೋರಿಯಲ್‌ ಪಾರ್ಕ್‌ಗೆ ತೆರಳುತ್ತಿದ್ದರು. ಇದೇ ವೇಳೆ ಮಹಿಳೆಯೊಬ್ಬರು ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಎದುರು ಬಂದು ನಿಂತಿದ್ದರು. ಜನಜಂಗುಳಿಯಲ್ಲಿಯೇ ಜಿಗಿದು, ಮಹಿಳೆಯು ವಾಹನದ ಎದುರು ಬಂದಿದ್ದರು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದಿದ್ದರು.

ಮಹಿಳೆ ಅಡ್ಡ ಬಂದಿದ್ದು ಹೀಗೆ…

“ನರೇಂದ್ರ ಮೋದಿ ಅವರ ಭೇಟಿ ವೇಳೆ ಭದ್ರತಾ ಲೋಪ ಎಸಗಿದ ಒಬ್ಬ ಎಎಸ್‌ಐ ಹಾಗೂ ಇಬ್ಬರು ಪೊಲೀಸ್‌ ಪೇದೆಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಎಎಸ್‌ಐ ಅಬು ಜಾಫರ್‌, ಪೇದೆಗಳಾದ ಚೋಟೆಲಾಲ್‌ ಟುಡು ಹಾಗೂ ರಂಜನ್‌ಕುಮಾರ್‌ ಅವರು ಸಸ್ಪೆಂಡ್‌ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ಆದಿವಾಸಿಗಳ ನಾಯಕ ಬಿಸ್ರಾ ಮುಂಡಾ ಜಯಂತಿ ಹಿನ್ನೆಲೆಯಲ್ಲಿ ಮೋದಿ ಅವರು ಎರಡು ದಿನ ಜಾರ್ಖಂಡ್‌ ಪ್ರವಾಸ ಕೈಗೊಂಡಿದ್ದರು. ಮೋದಿ ಅವರು ಇದೇ ವೇಳೆ ರೋಡ್‌ ಶೋ ಕೂಡ ಕೈಗೊಂಡರು.

ಇದನ್ನೂ ಓದಿ: ದೊಡ್ಡಮಟ್ಟದ ಭದ್ರತಾ ಲೋಪ; ಪಾರಾಗಲು ಫುಟ್​ಪಾತ್​ ಮೇಲೆ ಜಂಪ್​ ಮಾಡಿದ ಮುಖ್ಯಮಂತ್ರಿ

ಮಹಿಳೆ ಜಂಪ್‌ ಮಾಡಿದ್ದೇಕೆ?

ಪತಿಯ ವಿರುದ್ಧವೇ ದೂರು ನೀಡಲು ಮಹಿಳೆಯು ನರೇಂದ್ರ ಮೋದಿ ಅವರ ವಾಹನಕ್ಕೆ ಅಡ್ಡಿಯಾಗಿದ್ದಾರೆ ಎಂದು ತಿಳಿದುಬಂದಿದೆ. “ವಾಹನಕ್ಕೆ ಅಡ್ಡ ಬಂದ ಮಹಿಳೆಯನ್ನು ಕೂಡಲೇ ವಶಪಡಿಸಿಕೊಳ್ಳಲಾಯಿತು. ಮಹಿಳೆಯನ್ನು ಸಂಗೀತಾ ಝಾ ಎಂದು ಗುರುತಿಸಲಾಗಿದೆ. ಪತಿ ಕಿರುಕುಳ ನೀಡುತ್ತಿದ್ದಾನೆ. ಆತನಿಂದ ನನಗೆ ಪರಿಹಾರ ಬೇಕು. ಹಾಗೆಯೇ, ಆತನ ಸಂಬಂಧಿಕರು ಕಿರುಕುಳ ನೀಡಿದ್ದಾರೆ. ಪತಿ ಸೇರಿ ಎಲ್ಲರ ವಿರುದ್ಧ ಕೇಸ್‌ ದಾಖಲಿಸಲಬೇಕು. ಹಾಗಾಗಿ, ಮೋದಿ ಅವರಿಗೆ ದೂರು ನೀಡಲು ವಾಹನಕ್ಕೆ ಅಡ್ಡ ಬಂದೆ” ಎಂಬುದಾಗಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version