ಹೈದರಾಬಾದ್: ತೆಲುಗು ದೇಶಂ ಪಕ್ಷದ (TDP) ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕೈಗೊಂಡ ಸಮಾವೇಶದಲ್ಲಿ ಮತ್ತೆ ಕಾಲ್ತುಳಿತ (Andhra Pradesh Stampede) ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಹಾಗೆಯೇ, ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇವಲ ನಾಲ್ಕೇ ದಿನದ ಅಂತರದಲ್ಲಿ ಚಂದ್ರಬಾಬು ನಾಯ್ಡು ಅವರು ಕೈಗೊಂಡ ಸಮಾವೇಶದ ವೇಳೆ ಎರಡನೇ ಕಾಲ್ತುಳಿತ ಸಂಭವಿಸಿದೆ. ಡಿಸೆಂಬರ್ 28ರಂದು ನೆಲ್ಲೂರು ಜಿಲ್ಲೆಯಲ್ಲಿ ರೋಡ್ ಶೋ ಕೈಗೊಳ್ಳುವ ವೇಳೆ ಕಾಲ್ತುಳಿತ ಉಂಟಾಗಿ ಎಂಟು ಜನ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಕಾಲ್ತುಳಿತ ಉಂಟಾಗಿದೆ.
ಗುಂಟೂರು ಜಿಲ್ಲೆಯಲ್ಲಿ ಭಾನುವಾರ ಚಂದ್ರಬಾಬು ನಾಯ್ಡು ಅವರು ರಾಜಕೀಯ ಸಮಾವೇಶ ಆಯೋಜಿಸಿದ್ದರು. ಸಮಾವೇಶದಲ್ಲಿ ಅಪಾರ ಸಂಖ್ಯೆಯ ಜನ ಭಾಗವಹಿಸಿದ್ದು, ಇದೇ ವೇಳೆ ಕಾಲ್ತುಳಿತ ಉಂಟಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Andhra Pradesh Stampede | ಚಂದ್ರಬಾಬು ನಾಯ್ಡು ರೋಡ್ ಶೋ ವೇಳೆ ಕಾಲ್ತುಳಿತ, 8 ಜನರ ಸಾವು, 7 ಮಂದಿಗೆ ಗಾಯ