Site icon Vistara News

Migrants Workers: ಬೆಂಗಳೂರಿಂದ ಒಡಿಶಾಗೆ ನಡೆದುಕೊಂಡೇ ಹೋದ ಮೂವರು ಕಾರ್ಮಿಕರು! ಕಾರಣವೇನು?

3 migrant workers walks from Bangalore to Odisha

ನವದೆಹಲಿ: ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮೂವರು ಕಾರ್ಮಿಕರ ಕಣ್ಣೀರಿನ ಕಥೆ ಇದು. ದೂರದ ಒಡಿಶಾದಿಂದ ತುತ್ತು ಅನ್ನಕ್ಕಾಗಿ ಬಂದಿದ್ದ ಅವರಿಗೆ, ಬೆಂಗಳೂರಿನಲ್ಲಿ ಕೆಲಸ ಮಾಡಿಸಿಕೊಂಡವರು ಸರಿಯಾಗಿ ವೇತನವನ್ನು ಕೊಡಲಿಲ್ಲ. ದುಡ್ಡು ಕೇಳಿದರೆ ಚಿತ್ರಹಿಂಸೆಯೇ ಉತ್ತರವಾಗಿತ್ತು. ಇದರಿಂದ ಬೇಸತ್ತು ಕೊನೆಗೂ ಆ ಮೂವರು ನಡೆದುಕೊಂಡೇ 1000 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಹೋಗಿದ್ದಾರೆ!(Migrants Workers). ಇದು ನಂಬಲು ಕಷ್ಟ ಆದರೂ ಇದು ನಿಜ.

ಯಾವುದು ಆಹಾರ, ಹಣವಿಲ್ಲದೇ ಮೂವರು ಕಾರ್ಮಿಕರು ಸತತವಾಗಿ ನಡೆದುಕೊಂಡೇ ಒಡಿಶಾದ ಕಾಳಹಂಡಿ ಜಿಲ್ಲೆಯ ಕೋರಾಪತ್ ತಲುಪಿದ್ದಾರೆ. ಆಲ್ಮೋಸ್ಟ್ ಅವರು ಸಾವಿರ ಕಿ.ಮೀ. ನಡೆದಿದ್ದಾರೆ. ಕಾಳಹಂಡಿಯ ಜಯಪಟ್ಟಣದ ತಿಂಗಳಕನ್ ಗ್ರಾಮದ ಕಟಾರ್ ಮಾಝಿ, ಬುಡು ಮಾಝಿ ಮತ್ತು ಭಿಕಾರಿ ಮಾಝಿ ಅವರು ಮನೆಗೆ ತೆರಳುತ್ತಿದ್ದಾಗ ಕೊರಾಪುಟ್‌ನ ಪೊಟ್ಟಂಗಿ ಬ್ಲಾಕ್‌ನ ಪಡಲಗುಡದಲ್ಲಿ ಸ್ಥಳೀಯರು ಅವರನ್ನು ಗುರುತಿಸಿ, ಕೇಳಿದಾಗ ಇಡೀ ವಿಷಯ ಬಹಿರಂಗವಾಗಿದೆ.

ಈ ಮೂವರು ವಲಸೆ ಕಾರ್ಮಿಕರ 12 ಸದಸ್ಯರ ಗುಂಪಿನ ಭಾಗವಾಗಿದ್ದು, ಎರಡು ತಿಂಗಳ ಹಿಂದೆ ಬಾಳುಗಾಂವ್‌ನ ಮಧ್ಯವರ್ತಿಯೊಬ್ಬನ ಸಹಾಯದಿಂದ ಬೆಂಗಳೂರಿಗೆ ಬಂದಿದ್ದರು. ಕಂಪನಿಯೊಂದರಲ್ಲಿ ಅವರಿಗೆ ಕೆಲಸ ದೊರೆಯಿತು. ಕಂಪನಿಯವರು ಸರಿಯಾಗಿ ಇವರಿಗೆ ವೇತನ ನೀಡುತ್ತಿರಲಿಲ್ಲ. ಕಾರ್ಮಿಕರು ತಮ್ಮ ಬಾಕಿಯನ್ನು ಕೇಳಿದಾಗ, ಅವರಿಗೆ ಥಳಿಸಲಾಯಿತು. ಚಿತ್ರಹಿಂಸೆ ನೀಡಲಾಯಿತು. ಇದರಿಂದ ರೋಸಿ ಹೋದ ಅವರು ತಮ್ಮ ಊರಿಗೆ ಹೋಗಲು ನಿರ್ಧರಿಸಿದರು.

ಇದನ್ನೂ ಓದಿ: ಮಂಗಳೂರಿಗೆ ಅಕ್ರಮ ವಲಸೆ; 518ಕ್ಕೂ ಹೆಚ್ಚು ಕಾರ್ಮಿಕರ ವಿಚಾರಣೆ ನಡೆಸಿದ ಪೊಲೀಸರು

ಹಣ ಇಲ್ಲದಿದ್ದರೂ ಮೂವರು ವಲಸಿಗ ಕಾರ್ಮಿಕರು ಮಾರ್ಚ್ 26ರಂದು ತಮ್ಮೂರಿಗೆ ನಡೆದುಕೊಂಡೇ ಹೋಗಲು ಆರಂಭಿಸಿದರು. ದಿನದ ಬಹುತೇಕ ಸಮಯ ಅವರು ನಡೆಯುತ್ತಲೇ ಇರುತ್ತಿದ್ದರು. ಶನಿವಾರ ವಿಝಿಯನಗರಮ್ ತಲುಪಿದ್ದಾರೆ. ಅಲ್ಲಿಂದ ಅವರು ಕೋರಾಪತ್‌ಗೆ ಹೋಗುತ್ತಿದ್ದರು. ಆಗ ಸ್ಥಳೀಯರು ಅವರನ್ನು ಕರೆದ ಮಾತನಾಡಿಸಿದ್ದಾರೆ. ಆಗ, ಇಡೀ ಕತೆ ಬಯಲಾಗಿದೆ. ಆಗ, ಕೆಲವು ಅಂಗಡಿಕಾರರು ಅವರಿಗೆ ಆಹಾರ ನೀಡಿದ್ದಾರೆ. ಒಡಿಶಾ ಮೋಟರಿಸ್ಟ್ ಅಸೋಶಿಯೇಷನ್ ಭಗವಾನ್ ಪದಲ್ ಅವರು 1,500 ಹಣವನ್ನು ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Exit mobile version