ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ತೀವ್ರ ಹಿಮಪಾತವುಂಟಾಗಿ (Avalanche In Kashmir) ಮೂವರು ಯೋಧರು ಹುತಾತ್ಮರಾಗಿದ್ದಾರೆ. ಕುಪ್ವಾರ ಜಿಲ್ಲೆ ಮಾಚಿಲ್ ವಲಯದ ಗಡಿ ನಿಯಂತ್ರಣ ರೇಖೆ (Line Of Control) ಬಳಿ ಹಿಮಪಾತವುಂಟಾಗಿದೆ. ಹಿಮದಡಿ ಸಿಲುಕಿ ಯೋಧರು ಹುತಾತ್ಮರಾಗಿದ್ದು, ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಯೋಧರು ವಾಹನದಲ್ಲಿ ತೆರಳುವಾಗ ಹಿಮಪಾತ ಸಂಭವಿಸಿದೆ. ಮೂವರೂ ಯೋಧರು 56 ರಾಷ್ಟ್ರೀಯ ರೈಫಲ್ಸ್‌ನವರಾಗಿದ್ದಾರೆ. ಹಿಮಾಲಯ ಪ್ರದೇಶಗಳಲ್ಲಿ ಹಿಮಪಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತವೆ. ಉತ್ತರಾಖಂಡದಲ್ಲಿ ಅಕ್ಟೋಬರ್‌ನಲ್ಲಿ ಹಿಮಪಾತದಿಂದ 27 ಪರ್ವತಾರೋಹಿಗಳು ಮೃತಪಟ್ಟಿದ್ದರು.
ಇದನ್ನೂ ಓದಿ | ಸಿಯಾಚಿನ್‌ನಲ್ಲಿ 38 ವರ್ಷಗಳ ಹಿಂದೆ ಮೃತಪಟ್ಟಿದ್ದ ಯೋಧನ ಅಂತಿಮ ಸಂಸ್ಕಾರ