Site icon Vistara News

Three Soldiers Martyred | ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಮೂವರು ಯೋಧರು ಹುತಾತ್ಮ

ಶ್ರೀನಗರ: ಅಸ್ಸಾಂನಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ 16 ಯೋಧರು ಹತಾತ್ಮರಾದ ಬೆನ್ನಲ್ಲೇ ಬುಧವಾರ ಜಮ್ಮು-ಕಾಶ್ಮೀರದಲ್ಲೂ ಸೇನಾ ವಾಹನ ಕಂದಕಕ್ಕೆ ಬಿದ್ದು ಮೂವರು ಯೋಧರು (Three Soldiers Martyred) ಹುತಾತ್ಮರಾಗಿದ್ದಾರೆ.

ಕುಪ್ವಾರ ಜಿಲ್ಲೆ ಮಚ್ಚಲ್‌ ವಲಯದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿದೆ. ದುರಂತದಲ್ಲಿ ಒಬ್ಬ ಜೂನಿಯರ್‌ ಕಮಿಷನ್ಡ್‌ ಆಫೀಸರ್‌ (JCO) ಹಾಗೂ ಇಬ್ಬರು ಇತರೆ ರ‍್ಯಾಂಕ್‌ನ (OR) ಯೋಧರು ಹುತಾತ್ಮರಾಗಿದ್ದಾರೆ. ಮಂಜು ಆವರಿಸಿದ ರಸ್ತೆ ಮೇಲೆ ವಾಹನ ಸಂಚರಿಸುವಾಗ ಜಾರಿ ಆಳವಾದ ಕಂದಕಕ್ಕೆ ಬಿದ್ದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂವರೂ ಯೋಧರ ಶವಗಳನ್ನು ಕಂದಕದಿಂದ ತೆಗೆಯಲಾಗಿದೆ. ಡಿಸೆಂಬರ್‌ 23ರಂದು ಸಿಕ್ಕಿಂನ ಲಾಚೆನ್‌ ಪಟ್ಟಣದ ಬಳಿ ಸೇನೆಯ ವಾಹನ ಕಂದಕಕ್ಕೆ ಬಿದ್ದು 16 ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ನಾಲ್ವರು ಯೋಧರು ಗಾಯಗೊಂಡಿದ್ದರು.

ಇದನ್ನೂ ಓದಿ | 16 Jawans Martyred | ಸಿಕ್ಕಿಂನಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ 16 ಯೋಧರು ಹುತಾತ್ಮ

Exit mobile version