ಶ್ರೀನಗರ: ಲಷ್ಕರೆ ತೊಯ್ಬಾದ ಮೂವರು ಉಗ್ರರನ್ನು ಜಮ್ಮು-ಕಾಶ್ಮೀರದ ಶೋಪಿಯಾನ್ದಲ್ಲಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ (Terrorists Killed). ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇಲೆ ಇಲ್ಲಿನ ನಾಗ್ಬಾಲ್ ಏರಿಯಾವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದರು.
ಅಡಗಿದ್ದ ಉಗ್ರರನ್ನು ಹುಡುಕಿ ಬಂಧಿಸುವ ಇರಾದೆಯಿಂದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಆದರೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತಿರುಗಿ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಹತ್ಯೆ ನಡೆದ ಸ್ಥಳದಲ್ಲಿ ಇನ್ನೂ ಭದ್ರತೆ ಒದಗಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಆಗಸ್ಟ್ 30 ರ ಸಂಜೆ 5.21ರ ಹೊತ್ತಿಗೆ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು, ಅದಾಗಿ ಒಂದು ತಾಸಿನಲ್ಲಿ ಮತ್ತೊಬ್ಬ ಹತ್ಯೆಯಾಗಿದ್ದ. ಉಗ್ರರ ವಿರುದ್ಧದ ಕಾರ್ಯಾಚರಣೆ ಅಪ್ಡೇಟ್ನ್ನು ಕಾಶ್ಮೀರ ವಲಯ ಪೊಲೀಸರು ಟ್ವಿಟರ್ನಲ್ಲಿ ನೀಡಿದ್ದಾರೆ.
ಇದನ್ನೂ ಓದಿ: Kashmir Encounter: ಆವಂತಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆ, ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ವಶ