Site icon Vistara News

ಕಾರು ಕದಿಯಲು ಹೋದ ಮೂವರು ಕಳ್ಳ ಹುಡುಗರಿಗೆ ಡ್ರೈವಿಂಗ್​​ ಗೊತ್ತೇ ಇರ್ಲಿಲ್ಲ; ಹೇಗಿತ್ತು ಪ್ರಯಾಸದ ಕಳ್ಳತನ !

3 thieves go to steal van In Kanpur But what happened next

#image_title

‘ಒಂದಾನೊಂದು ಊರಿನಲ್ಲಿ..’ -ಹೀಗೆ ಪ್ರಾರಂಭವಾಗುವ ಹಲವು ಮಕ್ಕಳ ಕಥೆಗಳನ್ನು ನಾವೂ ಕೇಳಿದ್ದೇವೆ. ಇಂಥ ಹತ್ತು-ಹಲವು ಕಾಲ್ಪನಿಕ, ಮನರಂಜನಾತ್ಮಕ, ನೀತಿ ಕಥೆಗಳನ್ನು ಕೇಳಲು ಸಖತ್ ಖುಷಿಯಾಗುವುದಂತೂ ಸುಳ್ಳಲ್ಲ. ಆದರೆ ಈಗ ನಾವಿಲ್ಲಿ ಹೇಳಲು ಹೊರಟಿರುವುದು ಮೂವರು ಕಳ್ಳ ಹುಡುಗರ ಕಥೆಯನ್ನು. ಆದರೆ ಇದು ಕಾಲ್ಪನಿಕವಲ್ಲ. ಕಾನ್ಪುರದಲ್ಲಿ ನಡೆದ ಸತ್ಯ ಘಟನೆ. ಅವರು ಮಾಡಲು ಹೊರಟಿದ್ದು ಕಳ್ಳತನವೆಂಬ (Thieves go to Steal Van in Kanpur) ತಪ್ಪು ಕೆಲಸವನ್ನೇ ಆದರೂ, ಈ ಘಟನೆ ಸಖತ್ ಫನ್ನಿ ಎನ್ನಿಸಿದೆ. ಯಾಕೆ?..ಈ ಸ್ಟೋರಿ ಓದಿ !

ಸತ್ಯಂ ಕುಮಾರ್​, ಅಮನ್ ಗೌತಮ್ ಮತ್ತು ಅಮಿತ್ ವರ್ಮಾ ಎಂಬುವರು ಕಾಲೇಜು ವಿದ್ಯಾರ್ಥಿಗಳು. ಇವರಲ್ಲಿ ಸತ್ಯಂ ಕುಮಾರ್ ಮತ್ತು ಅಮಿತ್ ವರ್ಮಾ ಇಬ್ಬರೂ ಮಹಾರಾಜ್​​ಪುರದಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್​ ಓದುತ್ತಿದ್ದರೆ, ಅಮನ್ ಗೌತಮ್​ ಡಿಬಿಎಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಈತ ಪಾರ್ಟ್​ಟೈಂ ಕೆಲಸ ಕೂಡ ಮಾಡುತ್ತಿದ್ದ. ಈ ಮೂವರೂ ಸ್ನೇಹಿತರಿಗೆ ಒಂದು ಖತರ್ನಾಕ್ ಯೋಚನೆ ಬಂದೇಬಿಟ್ಟಿತು. ಒಂದೇ ಸಲ ಹಣ ಮಾಡಿಬಿಡಬೇಕು ಎಂದು ಯೋಚನೆ ಮಾಡಿದ ಇವರು ಕಾನ್ಪುರದ ದಬೌಲಿ ಏರಿಯಾದಲ್ಲಿರುವ ಒಂದು ಮಾರುತಿ ಕಾರನ್ನು ಕದಿಯಲು ಪ್ಲ್ಯಾನ್ ಮಾಡಿದರು. ಅದರಂತೆ ಮಾರುತಿ ಕಾರನ್ನು ಕದ್ದೇ ಬಿಟ್ಟರು. ಆದರೆ ಈ ಮೂವರಲ್ಲಿ ಒಬ್ಬರಿಗೂ ಡ್ರೈವಿಂಗ್ ಬರುತ್ತಿರಲಿಲ್ಲ. ಹೀಗಾಗಿ ಅವರ ಕಳ್ಳತನ ಅತ್ಯಂತ ಪ್ರಯಾಸವಾಗಿ ನಡೆದಿತ್ತು !

ಮುಂದೇನಾಯ್ತು?
ಕಾರು ಕದಿಯಲೆಂದು ಉತ್ಸಾಹದಿಂದೇನೋ ಹೋದರು. ಆದರೆ ಹೋದಾಗಲೇ ಗೊತ್ತಾಗಿತ್ತು ಯಾರಿಗೂ ಅದನ್ನು ಚಾಲನೆ ಮಾಡಲು ಬರುವುದಿಲ್ಲ ಎಂದು. ಹೀಗಾಗಿ ಮೂವರೂ ಯುವಕರು ಸೇರಿ ಕಾರನ್ನು ಸುಮಾರು 10 ಕಿಮೀ ದೂರ ತಳ್ಳಿಕೊಂಡೇ ಹೋಗಿದ್ದಾರೆ. ಕಲ್ಯಾಣ್​ಪುರ ಎಂಬಲ್ಲಿ ತಂದು ಅದನ್ನು ಒಂದೆಡೆ ಅಡಗಿಸಿಟ್ಟಿದ್ದಾರೆ. ಇನ್ನೇನು ಯಾರಿಗೂ ಡ್ರೈವಿಂಗ್ ಬರುವುದಿಲ್ಲ ಎಂದಾದ ಮೇಲೆ ಇಟ್ಟುಕೊಂಡು ಏನು ಮಾಡುವುದು ಎಂದು ಯೋಚನೆ ಮಾಡಿದ ಅವರು ಮೊದಲು ಕಾರಿನ ನಂಬರ್ ಪ್ಲೇಟ್​ ತೆಗೆದು ಹಾಕಿದರು. ಮೊದಲು ಯಾರನ್ನಾದರೂ ಹುಡುಕಿ, ಕಾರು ಮಾರಲು ಯತ್ನಿಸುವುದು, ಅದಾಗದೆ ಇದ್ದರೆ ಈಗಾಗಲೇ ಸತ್ಯ ಕುಮಾರ್ ನಡೆಸುತ್ತಿರುವ ವೆಬ್​ಸೈಟ್​ನಲ್ಲಿ ಕಾರಿನ ಫೋಟೋ, ಚಿಕ್ಕ ವಿಡಿಯೊ ಹಾಕಿ ಹರಿಬಿಟ್ಟು, ಈ ಮೂಲಕ ಮಾರಾಟ ಮಾಡುವುದು ಎಂದು ಆ ಮೂವರು ಹುಡುಗರು ನಿರ್ಧಾರ ಮಾಡಿದ್ದರು.

ಇದನ್ನೂ ಓದಿ: Viral Video : ಕಾರಿನಲ್ಲಿ ಬಂದು ಸರಗಳ್ಳತನ ಮಾಡಲಾರಂಭಿಸಿದ ಕಳ್ಳರು! ಹೇಗೆ ಕಳ್ಳತನ ಮಾಡುತ್ತಾರೆ ನೋಡಿ

ಆದರೆ ಕಾರು ಮಾಲೀಕ ಕೊಟ್ಟಿದ್ದ ದೂರಿನ ಅನ್ವಯ ಅಷ್ಟರಲ್ಲಾಗಲೇ ಕಾರ್ಯಾಚರಣೆ ಪ್ರಾರಂಭಿಸಿದ್ದ ಪೊಲೀಸರು ಮೂವರನ್ನೂ ಹಿಡಿದಿದ್ದಾರೆ. ಅವರಿಂದ ಕಾರನ್ನು ಮರಳಿ ಪಡೆದಿದ್ದಾರೆ. ಈ ಮೂವರೂ ಹುಡುಗರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್​ ಆಯುಕ್ತ ಭೇಜ್​ ನಾರಾಯಣ್ ಸಿಂಗ್ ತಿಳಿಸಿದ್ದಾರೆ.

Exit mobile version