Site icon Vistara News

Ram Mandir: ಜನವರಿಯಲ್ಲಿ ಅಯೋಧ್ಯೆಗೆ ನಿತ್ಯ 3ರಿಂದ 5 ಲಕ್ಷ ಜನರ ಭೇಟಿ ನಿರೀಕ್ಷೆ!

3 to 5 lakh people may visit every day in January to Ayodhya Ram mandir

ನವದೆಹಲಿ: ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿ (Ayodhya) ಈಗ ಪ್ರವಾಸೋದ್ಯಮ (Tourism) ಚಟುವಟಿಕೆಗಳ ಗರಿಗೆದರಿವೆ. ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ ವಿಮಾನ ನಿಲ್ದಾಣ (Ayodhya Airport) ಮತ್ತು ರೈಲು ನಿಲ್ದಾಣಗಳನ್ನು (Ayodhya Rail Station) ಉದ್ಘಾಟಿಸಿದರು. ಇದರೊಂದಿಗೆ ಅಯೋಧ್ಯೆಗೆ ಸಂಪರ್ಕಿಸುವ ಮಾರ್ಗಗಳು ಸುಲಭಗೊಂಡಿವೆ. ಹಾಗಾಗಿ, ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿದ್ದು, ಜನವರಿಯಲ್ಲಿ ಪ್ರತಿ ದಿನ ಅಯೋಧ್ಯೆಗೆ ಸುಮಾರು 3ರಿಂದ 5 ಲಕ್ಷ ಜನರು ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಜನವರಿ 22ರಂದು ರಾಮಮಂದಿರ ಉದ್ಘಾಟನೆಯ ನಂತರ ಅಯೋಧ್ಯೆ ಪ್ರವಾಸಿಗರಿಂದ ತುಂಬು ತುಳಕುವ ನಿರೀಕ್ಷೆ ಇದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಗೆ 7,000 ಜನರು ಮತ್ತು ದೇವಾಲಯವನ್ನು ತೆರೆದ ನಂತರ ಕನಿಷ್ಠ ಒಂದು ತಿಂಗಳವರೆಗೆ ಪ್ರತಿದಿನ 3-5 ಲಕ್ಷ ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2024ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಾಗ, ನಗರಕ್ಕೆ ಪ್ರವಾಸೋದ್ಯಮವು 10 ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು 2022ರಲ್ಲಿ 8,342.7% ವಾರ್ಷಿಕ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ನಂಬಲಾಗದ ರೀತಿಯಲ್ಲಿ ಏರಿಕೆಯನ್ನು ದಾಖಲಿಸಿತ್ತು. ಈ ಪೈಕಿ ಅಯೋಧ್ಯೆ ಜಿಲ್ಲೆಯಲ್ಲಿ 2.36 ಕೋಟಿ ದೇಶೀಯ ಮತ್ತು 1,465 ವಿದೇಶಿ ಪ್ರವಾಸಿಗರನ್ನು ಆಗಮಿಸಿದ್ದಾರೆ. 2021 ರಲ್ಲಿ 1.73 ಲಕ್ಷ ದೇಶಿ ಜನರು ಆಗಮಿಸಿದ್ದರು. ವಿದೇಶಿಗರ ಸಂಖ್ಯೆ ಶೂನ್ಯವಾಗಿತ್ತು. 2022ರ ಹೊಸ ವರ್ಷದಂದು ಸುಮಾರು 30 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದರು. 2023ರ ಮೊದಲ ದಿನದಲ್ಲಿಅಯೋಧ್ಯೆ ಪೊಲೀಸರು ಸಮಾರು 50 ಲಕ್ಷ ಜನರ ನಿರ್ವಹಣೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮಮಂದಿರ ನಿರ್ಮಾಣದಿಂದ ಅಯೋಧ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗಿವೆ. ಅಯೋಧ್ಯೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ಸ್ಥಳೀಯರು ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ. ದೇವಾಲಯದ ಸುತ್ತಲಿನ ಪ್ರದೇಶದ ಸುತ್ತಲೂ ಹಲವಾರು ಹೊಸ ಮಳಿಗೆಗಳನ್ನು ತೆರೆಯಲಾಗಿದೆ, ಪ್ರವಾಸಿಗರಿಗೆ ವಿವಿಧ ಸ್ಥಳೀಯ ಉತ್ಪನ್ನಗಳನ್ನು ನೀಡುತ್ತಿದೆ. ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರ ಮಾಲೀಕರಿಗೆ, ವಸತಿ, ಸಾರಿಗೆ, ಆಹಾರ, ಸರಕು ಮತ್ತು ಸೇವೆಗಳಿಗೆ ಹೆಚ್ಚಿದ ಬೇಡಿಕೆಯಿಂದ ಎಲ್ಲರೂ ಆದಾಯದ ಮೂಲಗಳನ್ನು ಪಡೆಯುತ್ತಾರೆ.

ಈ ಸುದ್ದಿಯನ್ನೂ ಓದಿ: Ram Temple: ರಾಮನ ಹೆಸರಲ್ಲಿ ಭಕ್ತರಿಗೆ ಮೋಸ; ಕ್ಯೂಆರ್‌ ಕೋಡ್ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ

Exit mobile version