Site icon Vistara News

Tigers Death In India: ದೇಶದ ಹಲವೆಡೆ ಎರಡೇ ತಿಂಗಳಲ್ಲಿ 30 ಹುಲಿಗಳ ಸಾವು, ಏನಿದಕ್ಕೆ ಕಾರಣ?

30 Tiger Dead In 2 Months, Why India Is Witnessing A Spike In Death Of Tigers

ಹುಲಿಗಳ ಸಾವು

ನವದೆಹಲಿ: ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಗತ್ತಿನಲ್ಲಿಯೇ ಅತಿ ಹುಲಿಗಳನ್ನು ಹೊಂದಿದ ದೇಶ ಎಂಬ ಖ್ಯಾತಿಯೂ ಭಾರತದ್ದಾಗಿದೆ. ಆದರೆ, ಕಳೆದ ಎರಡು ತಿಂಗಳಲ್ಲಿಯೇ ದೇಶದ ಹಲವೆಡೆ ೩೦ಕ್ಕೂ ಅಧಿಕ ಹುಲಿಗಳು ಮೃತಪಟ್ಟಿರುವುದು (Tigers Death In India) ಹಾಗೂ ದಿನೇದಿನೆ ಹುಲಿಗಳ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವುದು ಪ್ರಾಣಿಗಳು ಹಾಗೂ ಪರಿಸರ ಪ್ರಿಯರಲ್ಲಿ ಆತಂಕ ಹೆಚ್ಚಾಗಿದೆ.

೩೦ ಹುಲಿಗಳಲ್ಲಿ ೧೬ ಹುಲಿಗಳು ಹುಲಿ ಸಂರಕ್ಷಿತ ಪ್ರದೇಶಗಳ ಹೊರಗಿನ ಪ್ರದೇಶದಲ್ಲಿ ಮೃತಪಟ್ಟಿವೆ. ಉಳಿದ ಹುಲಿಗಳು ಕನ್ಹಾ, ಪನ್ನಾ, ಪೆಂಚ್‌, ಸತ್ಪುರಾ, ಒರಾಂಗ್‌, ಕಾಜಿರಂಗ ಸೇರಿ ಹಲವು ಸಂರಕ್ಷಿತ ಪ್ರದೇಶಗಳಲ್ಲಿ ಮೃತಪಟ್ಟಿವೆ. ಮಧ್ಯಪ್ರದೇಶ ರಾಜ್ಯವೊಂದರಲ್ಲಿಯೇ ಒಂಬತ್ತು ಹುಲಿಗಳು ಮೃತಪಟ್ಟರೆ, ಮಧ್ಯಪ್ರದೇಶದಲ್ಲಿ ಏಳು ಹುಲಿಗಳು ಸಾವಿಗೀಡಾಗಿವೆ.

ಹುಲಿಗಳ ಸಾವಿಗೆ ಕಾರಣವೇನು?

ದಿನೇದಿನೆ ಹೆಚ್ಚಿನ ಹುಲಿಗಳು ಮೃತಪಡುತ್ತಿರುವ ಕುರಿತು ಅರಣ್ಯ ಇಲಾಖೆಗಳ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. “ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ಹುಲಿಗಳ ಸಾವಿನ ಸಂಖ್ಯೆ ಜಾಸ್ತಿಯಾಗಿರುತ್ತದೆ. ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾದಂತೆ, ಅವುಗಳ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತದೆ. ವಾರ್ಷಿಕವಾಗಿ ದೇಶದಲ್ಲಿ ಸರಾಸರಿ ೨೦೦ ಹುಲಿಗಳು ಸಾವಿಗೀಡಾಗುತ್ತವೆ. ಹುಲಿಗಳ ಸಂಘರ್ಷವೂ ಅವುಗಳ ಸಾವಿಗೆ ಕಾರಣವಾಗಿದೆ. ಒಂದು ಹುಲಿಯ ಸರಾಸರಿ ಜೀವಿತಾವಧಿ ೧೨ ವರ್ಷ ಆಗಿರುತ್ತದೆ. ಸಹಜವಾಗಿಯೇ ಪ್ರತಿ ವರ್ಷ ಹುಲಿಗಳ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇದು ಆತಂಕಕಾರಿ ಬೆಳವಣಿಗೆ ಅಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Tiger Death: ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ; ಮೂಡಿದ ಹಲವು ಅನುಮಾನ

Exit mobile version