Site icon Vistara News

30 vs 24: ಈಗ ಅಸಲಿ ಆಟ ಶುರು! ಕಾಂಗ್ರೆಸ್ ಕೂಟದಲ್ಲಿ 24 ಪಕ್ಷಗಳಿದ್ದರೆ, ಬಿಜೆಪಿಯ ಎನ್‌ಡಿಎದಲ್ಲಿ 30 ಪಾರ್ಟಿ!

Modi and Rahul

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (2024 Lok Sabha Election) ರಾಜಕೀಯ ಪಕ್ಷಗಳು (Political Party) ತಾಲೀಮು ಶುರು ಮಾಡಿವೆ. ವಿಶೇಷವಾಗಿ ಕಾಂಗ್ರೆಸ್ (Congress) ಮತ್ತು ಬಿಜೆಪಿಗಳೆರಡೂ (BJP) ತಮ್ಮ ಒಕ್ಕೂಟಗಳನ್ನು ಬಲಪಡಿಸುವ ಪ್ರಯತ್ನಕ್ಕೆ ಹಾಕಿವೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಎರಡನೇ ಸಭೆ ಸೋಮವಾರ(ಜುಲೈ 17) ಬೆಂಗಳೂರಲ್ಲಿ (Bengaluru) ನಡೆಯಲಿದೆ(Opposition Meet). ಇದೇ ವೇಳೆ, ಮಂಗಳವಾರ (ಜುಲೈ 18) ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸಭೆಯನ್ನು (NDA Meet) ಆಯೋಜಿಸಲಾಗಿದೆ. ಈಗಿರುವ ಮಾಹಿತಿಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎದಲ್ಲಿ 30 ಹಾಗೂ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಕೂಟದಲ್ಲಿ 24 ಪಕ್ಷಗಳಿವೆ. ಈ ಎಲ್ಲ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಒಗ್ಗಟ್ಟಿನ ಮೂಲಕ ಚುನಾವಣೆಯನ್ನು ಎದುರಿಸಲು ಕಾರ್ಯತಂತ್ರವನ್ನು ಹೆಣೆಯುತ್ತಿವೆ. ಈ ಮಧ್ಯೆ, ಜುಲೈ 20ರಿಂದ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗುವುದರಿಂದ ಯಾವ ಪಕ್ಷ ಯಾವ ಕೂಟದಲ್ಲಿದೆ ಎಂಬುದು ಲೆಕ್ಕ ಸಿಗಲಿದೆ(30 vs 24).

ಮಂಗಳವಾರ ನಡೆಯಲಿರುವ ಎನ್‌ಡಿಎ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ವಹಿಸಲಿದ್ದಾರೆ. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಕೂಡ ಹಾಜರು ಇರಲಿದ್ದಾರೆ. ತಮ್ಮ ಹಳೆಯ ಮೈತ್ರಿ ಪಕ್ಷಗಳು ಮಾತ್ರವಲ್ಲದೇ ಬಿಜೆಪಿ ಹೊಸ ಪಕ್ಷಗಳನ್ನೂ ಕೂಟಕ್ಕೆ ಆಹ್ವಾನಿಸಿದೆ. ಈ ಸಭೆಯ ದಿಲ್ಲಿಯ ಅಶೋಕ ಹೊಟೇಲ್‌ನಲ್ಲಿ ನಡೆಯಲಿದೆ. ಈಗ ಎನ್‌ಡಿಯ ತೆಕ್ಕೆಗೆ ಸರಿಯುತ್ತಿರುವ ಎಲ್ಲ ಪಕ್ಷಗಳು ಸಂಸತ್ತಿನಲ್ಲಿ ತಮ್ಮ ಪ್ರತಿನಿಧಿಗಳನ್ನು ಹೊಂದಿಲ್ಲ.

ಬಿಹಾರದಿಂದ ಚಿರಾಗ್ ಪಾಸ್ವಾನ್ ಲೋಕಜನಶಕ್ತಿ ಪಾರ್ಟಿ(ರಾಮ್ ವಿಲಾಸ್ ಪಾಸ್ವಾನ್), ಜಿತನ್ ರಾಮ್ ಮಾಂಜ್ಝಿ ಹಿಂದೂಸ್ತಾನಿ ಅವಾಮಿ ಮೋರ್ಚಾ, ಉಪೇಂದ್ರ ಸಿಂಗ್ ಖುಷವಾ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿಯ ಮುಕೇಶ್ ಸಹಾನಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ನಾಯಕರ ಎಲ್ಲ ಪಕ್ಷಗಳು ಎನ್‌ಡಿಎ ಸೇರ್ಪಡೆಯಾಗಲಿವೆ.

ಅಖಿಲೇಶ್ ಯಾದವ್ ಅವರ ಮಾಜಿ ಮೈತ್ರಿ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿಯ ಓಂ ಪ್ರಕಾಶ್ ರಾಜಭರ್ ಎನ್‌ಡಿಎ ಸೇರಿದ್ದಾರೆ. ಸಮಾಜಿವಾದಿ ಪಾರ್ಟಿಯ ಎಂಎಲ್ಎ ದಾರಾ ಸಿಂಗ್ ಚೌಹಾನ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಅಮಿತ್ ಶಾ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದಾರೆ.

ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಮತ್ತು ಬಾದಲ್ ಕುಟುಂಬ ಹಿಡಿತದಲ್ಲಿರುವ ಶಿರೋಮಣಿ ಅಕಾಲಿ ದಳ ಎನ್‌ಡಿಎ ಸೇರ್ಪಡೆಯಾಗಲಿವೆ ಎಂಬ ಊಹೆಗಳಿವೆ. ಆದರೂ, ಬಿಜೆಪಿ ಈ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಮತ್ತು ಆಂಧ್ರ ಪ್ರದೇಶದಲ್ಲಿ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದೊಂದಿಗೆ ಕಣಕ್ಕಿಳಿಯಲ ನಿರ್ಧರಿಸಿದೆ.

ಎನ್‌ಡಿಯ ಪಾಳಯದಲ್ಲಿರುವ 30 ಪಕ್ಷಗಳು ಯಾವುವು?

ಬಿಜೆಪಿ, ಎಐಎಡಿಎಂಕೆ, ಶಿವಸೇನೆ(ಶಿಂಧೆ ಬಣ), ನ್ಯಾಷನಲ್ ಪೀಪಲ್ಸ್ ಪಾರ್ಟಿ, ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ, ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ, ಜನ ನಾಯಕ ಜನತಾ ಪಾರ್ಟಿ, ಇಂಡಿಯಾ ಮಕ್ಕಳ್ ಕಲ್ವಿ ಮುನ್ನೇತ್ರ ಕಳಗಂ, ಆಲ್ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಮಿಜೋ ನ್ಯಾಷನಲ್ ಫ್ರಂಟ್, ತಮಿಲ್ ಮಕ್ಕಳ್ ಕಚ್ಚಿ, ಐಪಿಎಫ್‌ಟಿ, ಬೋಡೋ ಪೀಪಲ್ಸ್ ಪಾರ್ಟಿ, ಪತಳಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಅಪ್ನಾದಳ್, ಅಸ್ಸಾಮ್ ಗಣ ಪರಿಷತ್, ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ, ನಿಷಾದ್ ಪಾರ್ಟಿ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬ್ರಲ್, ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಪುದುಚೆರಿ, ಶಿರೋಮಣಿ ಅಕಾಲಿ ದಳ ಸಂಯುಕ್ತ, ಜನಸೇನಾ.

ಈ ಪಕ್ಷಗಳ ಜತೆಗೆ ಹೊಸದಾಗಿ ಎನ್‌ಸಿಪಿ(ಅಜಿತ್ ಪವಾರ್ ಬಣ), ಲೋಕ ಜನಶಕ್ತಿ ಪಾರ್ಟಿ(ರಾಮ್ ವಿಲಾಸ್ ಪಾಸ್ವಾನ್), ಹಿಂದೂಸ್ತಾನಿ ಅವಾಮಿ ಲೀಗ್, ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ವಿಕಾಸಶೀಲ ಇನ್ಸಾನ್ ಪಾರ್ಟಿ, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ಕೂಡ ಎನ್‌ಡಿಎ ಸೇರ್ಪಡೆಯಾಗಲಿವೆ.

ಈ ಸುದ್ದಿಯನ್ನೂ ಓದಿ: Opposition Meet: ಕೇಂದ್ರದ ‘ದಿಲ್ಲಿ ಸುಗ್ರೀವಾಜ್ಞೆ’ಗೆ ಕಾಂಗ್ರೆಸ್ ವಿರೋಧ; ಖುಷಿಯಾದ ಆಪ್!

ಕಾಂಗ್ರೆಸ್ ನೇತೃತ್ವದ ಕೂಟದಲ್ಲಿ ಯಾವೆಲ್ಲ ಪಕ್ಷಗಳಿವೆ?

ಕಾಂಗ್ರೆಸ್, ಟಿಎಂಸಿ, ಸಿಪಿಐ, ಸಿಪಿಐ(ಎಂ), ಎನ್‌ಸಿಪಿ(ಶರದ್ ಪವಾರ್ ಬಣ), ಸಂಯುಕ್ತ ಜನತಾ ದಳ, ಡಿಎಂಕೆ, ಆಪ್, ಜೆಎಂಎಂ, ಶಿವಸೇನಾ( ಉದ್ಧವ್ ಠಾಕ್ರೆ ಬಣ), ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಾರ್ಟಿ, ನಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ(ಎಂಎಲ್), ಆರ್‌ಎಲ್‌ಡಿ, ಐಯುಎಂಎಲ್, ಕೇರಳ ಕಾಂಗ್ರೆಸ್ (ಎಂ), ಎಂಡಿಎಂಕೆ, ವಿಸಿಕೆ, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್, ಕೆಎಂಡಿಕೆ, ಎಐಎಫ್‌ಬಿ.

Exit mobile version