Site icon Vistara News

ಮೋದಿ ಕುರಿತು ಬಿಬಿಸಿ ಡಾಕ್ಯುಮೆಂಟರಿ ಖಂಡಿಸಿ ದೇಶದ ನಿವೃತ್ತ ಜಡ್ಜ್‌ಗಳು, ಕನ್ನಡಿಗರು ಸೇರಿ 300 ಗಣ್ಯರಿಂದ ಪತ್ರ

Gujarat Assembly passes resolution against BBC For Documentary On Narendra Modi

ಬಿಬಿಸಿ ಡಾಕ್ಯುಮೆಂಟರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿಯು ಇಂಡಿಯಾ: ದಿ ಮೋದಿ ಕ್ವಶ್ಚನ್‌ (India: The Modi Question) ಎಂಬ ಡಾಕ್ಯುಮೆಂಟರಿ ಬಿಡುಗಡೆ ಮಾಡಿರುವುದಕ್ಕೆ ಭಾರತ, ಬ್ರಿಟನ್‌ ಸೇರಿ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ, ಭಾರತದ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಸೇನಾಧಿಕಾರಿಗಳು, ರಾಯಭಾರಿಗಳು ಸೇರಿ 300ಕ್ಕೂ ಅಧಿಕ ಗಣ್ಯರು ಪತ್ರದ ಮೂಲಕ ಬಿಬಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 300ಕ್ಕೂ ಅಧಿಕ ಗಣ್ಯರಲ್ಲಿ ಕರ್ನಾಟಕದವರೂ ಇದ್ದಾರೆ.

ರಕ್ಷಣಾ ಮಾಜಿ ಕಾರ್ಯದರ್ಶಿ ಯೋಗೇಂದ್ರ ನಾರಾಯಣ್‌, ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥ ಸಂಜೀವ್‌ ತ್ರಿಪಾಠಿ, ಮಾಜಿ ಗೃಹ ಕಾರ್ಯದರ್ಶಿ ಎಲ್‌.ಸಿ.ಗೋಯಲ್‌ ಸೇರಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ರಾಯಭಾರಿಗಳು, ನಿವೃತ್ತ ಡಿಜಿಪಿಗಳು ಸೇರಿ ನೂರಾರು ಗಣ್ಯರು ಪತ್ರದ ಮೂಲಕ ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದವರು ಯಾರು?

ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿಗಳಾದ ಎಸ್‌.ಎಲ್‌.ಗಂಗಾಧರಪ್ಪ, ಎ.ಕೆ.ಮೊನ್ನಪ್ಪ, ಸೋಮಶೇಖರ್‌, ರಮೇಶ್ ಝಳಕಿ, ಮಾಜಿ ಹೆಚ್ಚುವರಿ ಕಾರ್ಯದರ್ಶಿಗಳಾದ ಎಂ.ಮದನ್‌ ಗೋಪಾಲ್, ಎಂ.ಲಕ್ಷ್ಮೀನಾರಾಯಣ, ಕರ್ನಾಟಕ ಸರ್ಕಾರದ ಜವಳಿ ಇಲಾಖೆ ಮಾಜಿ ಆಯುಕ್ತ ಬಿ.ಎಫ್‌.ಪಾಟೀಲ್‌ ಸೇರಿ ಕರ್ನಾಟಕದ ಒಟ್ಟು 11 ಗಣ್ಯರು ಖಂಡನೆ ವ್ಯಕ್ತಪಡಿಸಿದ ಗಣ್ಯರ ಪಟ್ಟಿಯಲ್ಲಿದ್ದಾರೆ.

ಏಕಪಕ್ಷೀಯ ಎಂದು ಜರಿದ ರಾ ಮಾಜಿ ಮುಖ್ಯಸ್ಥ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಬಿಡುಗಡೆ ಮಾಡಿದ ಡಾಕ್ಯುಮೆಂಟರಿ ಏಕಪಕ್ಷೀಯವಾಗಿದೆ ಎಂದು ರಾ ಮಾಜಿ ಮುಖ್ಯಸ್ಥ ಸಂಜೀವ್ ತ್ರಿಪಾಠಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಬಿಸಿ ಸಾಕ್ಷ್ಯಚಿತ್ರವು ಏಕಪಕ್ಷೀಯವಾಗಿದೆ. ಸುಳ್ಳುಗಳು, ತಪ್ಪುಗಳು ಹಾಗೂ ಪೂರ್ವಗ್ರಹಪೀಡಿತವಾಗಿ ನಿರ್ಮಿಸಲಾಗಿದೆ” ಎಂದಿದ್ದಾರೆ. “ಗೋದ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹೀಗಿದ್ದರೂ, ಹಿಂದುಗಳು ಹಾಗೂ ಮುಸ್ಲಿಮರ ಮಧ್ಯೆ ನಡೆದ ಸಂಘರ್ಷಕ್ಕೆ ಮೋದಿ ಅವರೇ ಕಾರಣ ಎಂಬುದಾಗಿ ಹೇಳುವುದು ತಪ್ಪು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಮೋದಿ ಕುರಿತು ಆಕ್ಷೇಪಾರ್ಹ ಸಾಕ್ಷ್ಯಚಿತ್ರ: ಲಿಂಕ್‌, ಪೋಸ್ಟ್‌, ವಿಡಿಯೊ ಡಿಲೀಟ್‌ ಮಾಡುವಂತೆ ಜಾಲತಾಣಗಳಿಗೆ ಕೇಂದ್ರ ಆದೇಶ

Exit mobile version