Site icon Vistara News

Kiren Rijiju: ಕಾನೂನು ಸಚಿವ ರಿಜಿಜು ವಿರುದ್ಧ 300 ವಕೀಲರ ಬಹಿರಂಗ ಪತ್ರ, ಕಾರಣ ಏನು?

Law minister Kiren Rijiju's car meets with minor accident in Jammu Kashmir

ಕಿರಣ್‌ ರಿಜಿಜು

ನವದೆಹಲಿ: ನಿವೃತ ನ್ಯಾಯಾಧೀಶರನ್ನು ಭಾರತ ವಿರೋಧಿ ಗ್ಯಾಂಗ್ ಎಂದು ಟೀಕಿಸಿದ್ದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು (Kiren Rijiju) ವಿರುದ್ಧ ನ್ಯಾಯವಾದಿಗಳು ತಿರುಗಿ ಬಿದ್ದಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಸುಮಾರು 300 ವಕೀಲರು ಕೇಂದ್ರ ಸಚಿವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಹಿರಂಗ ಪತ್ರ ಬರೆದಿರುವ ನ್ಯಾಯವಾದಿಗಳು, ಕೇಂದ್ರ ಸಚಿವ ರಿಜಿಜು ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ವಿರುದ್ದ ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಅನಗತ್ಯ ಟೀಕೆಯನ್ನು ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಕಾನೂನುಗಳನ್ನು ಎತ್ತಿ ಹಿಡಿಯಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಜನರ ವಿರುದ್ಧ ದೇಶ ವಿರೋಧಿ ಆರೋಪಗಳು ಮತ್ತು ಅವರ ವಿರುದ್ಧ ಪ್ರತೀಕಾರದ ಬೆದರಿಕೆಯು ನಮ್ಮ ಮಹಾನ್ ರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಕೀಳು ಮಟ್ಟದ ಭಾಷಣವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮಾರ್ಚ್ 18ರಂದು ನಡೆದ ಇಂಡಿಯಾ ಕಾನ್‌ಕ್ಲೇವ್‌ನಲ್ಲಿ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಕಿರೆನ್ ರಿಜಿಜು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಾಂಬೆ ವಕೀಲರು ಸುಪ್ರೀ ಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Kiren Rijiju: ಸುಪ್ರೀಂ ಕೋರ್ಟ್‌ ನಮಗೆ ಎಚ್ಚರಿಕೆ ನೀಡುವ ಹಾಗಿಲ್ಲ, ಬಿಕ್ಕಟ್ಟು ಮುಂದುವರಿಸಿದ ಕಿರಣ್‌ ರಿಜಿಜು

ನ್ಯಾಯಾಂಗ ಮತ್ತು ಕೊಲಿಜಿಯಂ ವ್ಯವಸ್ಥೆಯ ಕುರಿತು ಹೇಳಿಕೆ ನೀಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಬಾಂಬೆ ವಕೀಲರ ಸಂಘ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

Exit mobile version