Site icon Vistara News

First Batch Of Agniveers | ನೌಕಾಪಡೆಗೆ 341 ಸ್ತ್ರೀಯರು ಸೇರಿ 3 ಸಾವಿರ ಅಗ್ನಿವೀರರ ನೇಮಕ, ಸ್ತ್ರೀ ಸಬಲೀಕರಣಕ್ಕೆ ಮುನ್ನುಡಿ

Agniveers For Navy

ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ನೌಕಾಪಡೆಗೆ ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾದ ಮೂರು ಸಾವಿರ ಅಗ್ನಿವೀರರನ್ನು (First Batch Of Agniveers) ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರಲ್ಲಿ ೩೪೧ ಹೆಣ್ಣುಮಕ್ಕಳಿದ್ದಾರೆ ಎಂದು ನೌಕಾಪಡೆ ಮುಖ್ಯಸ್ಥ ಆರ್‌.ಹರಿಕುಮಾರ್‌ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುರುಷರಂತೆ ಮಹಿಳೆಯರು ಕೂಡ ಪರೀಕ್ಷೆಗೆ ಹಾಜರಾಗಿದ್ದು, ಉತ್ತೀರ್ಣರಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಹಲವು ರೀತಿಯಲ್ಲಿ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ೨೦೪೭ರ ವೇಳೆಗೆ ನೌಕಾಪಡೆಯು ಸಂಪೂರ್ಣವಾಗಿ ಆತ್ಮನಿರ್ಭರವಾಗಲಿದೆ ಎಂಬ ಭರವಸೆಯನ್ನು ಸರ್ಕಾರಕ್ಕೆ ನೀಡಲಾಗಿದೆ” ಎಂದು ತಿಳಿಸಿದರು.

“ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರೇಣಿಯ (Rank) ಅನ್ವಯವೇ ಹೆಣ್ಣುಮಕ್ಕಳನ್ನು ನೌಕಾಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆಯ್ಕೆಯಲ್ಲಿ ಒಂದೇ ಮಾದರಿಯನ್ನು ಅನುಸರಿಸಲಾಗಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಏಕರೂಪದ ನಿಯಮಗಳು ಅನ್ವಯವಾಗಿವೆ. ಇವರನ್ನು ನೌಕೆ, ವಾಯುನೆಲೆ, ವಿಮಾನಗಳಲ್ಲಿ ನಿಯೋಜಿಸಲಾಗುತ್ತದೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | Agneepath Recruitment | ಮಹಿಳಾ ಅಗ್ನಿವೀರರ ನೇಮಕಕ್ಕೆ ಬೆಂಗಳೂರಿನಲ್ಲಿಯೇ ನಡೆಯಲಿದೆ ರ‍್ಯಾಲಿ

Exit mobile version