ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ರಾಜೌರಿ ಜಿಲ್ಲೆಯ ತಾನಮಂಡಿ ಪ್ರದೇಶದಲ್ಲಿ ರಸ್ತೆ ಬದಿಯ ಕಂದಕಕ್ಕೆ ಕಾರು (Car Accident) ಉರುಳಿ ನಾಲ್ವರು ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.
“ರಸ್ತೆ ಬದಿಯ ಕಂದಕಕ್ಕೆ ಉರುಳಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ರಾಜೌರಿ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಮೆಹ್ಮೂದ್ ಹುಸೇನ್ ಬಜಾರ್ ಮಾಹಿತಿ ನೀಡಿದ್ದಾರೆ.
ವಿಸ್ತಾರ ನ್ಯೂಸ್ WhatsApp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
J&K | Four died and five sustained injuries after a car met with an accident in the Thanamandi area of Rajouri. The injured are under treatment at Government Medical College & Associated Hospital in Rajouri: Dr Mehmood Hussain Bajar, Medical Superintendent, GMC, Rajouri pic.twitter.com/XZmgcWs5zN
— ANI (@ANI) July 5, 2023
ಪ್ರತ್ಯೇಕ ಘಟನೆಗಳಲ್ಲಿ 8 ಜನ ಸಾವು
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಘಟನೆ ಮಾತ್ರವಲ್ಲ, ದೋಡಾ ಹಾಗೂ ರಾಮಬನ್ ಜಿಲ್ಲೆಯಲ್ಲಿಯೂ ನಡೆದ ಪ್ರತ್ಯೇಕ ಘಟನೆಗಳಲ್ಲಿ 8 ಜನ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರೂ ಜಿಲ್ಲೆಗಳಲ್ಲಿ ವಾಹನಗಳು ಆಳವಾದ ಕಂದಕಕ್ಕೆ ಉರುಳಿಯೇ ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bangalore- Mysore Expressway: ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ತಡೆಯಲು ಸ್ಪೀಡ್ ರೇಡಾರ್ ಗನ್
ಆಳವಾದ ಕಂದಕಕ್ಕೆ ವಾಹನಗಳು ಬಿದ್ದ ಕಾರಣ ಜನರನ್ನು ರಕ್ಷಿಸಲು ಸಿಬ್ಬಂದಿಯು ಹರಸಾಹಸಪಟ್ಟರು. ಗಾಯಗೊಂಡವರನ್ನು ಆಯಾ ಜಿಲ್ಲೆಗಳ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಮಳೆಗಾಲ ಆರಂಭವಾದರಂತೂ ಭೂಕುಸಿತ, ಕಂದಕಕ್ಕೆ ಕಾರು ಉರುಳುವ ಪ್ರಕರಣಗಳು ಹೆಚ್ಚಾಗುತ್ತವೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ