ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ದ್ವಿಗ್ವಿಜಯ್ ಸಿಂಗ್ ಅವರು ಪುಲ್ವಾಮಾ ದಾಳಿ (Pulwama Attack) ಕುರಿತು ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ”ಇಂದು ನಾವು ಪುಲ್ವಾಮಾದಲ್ಲಿ ಗುಪ್ತಚರ ವೈಫಲ್ಯದಿಂದ ಮಡಿದ 40 ಸಿಆರ್‌ಪಿಎಫ್ ಹುತಾತ್ಮರಿಗೆ ನಮನ ಸಲ್ಲಿಸುತ್ತೇವೆ. ಹುತಾತ್ಮರಾದ ಎಲ್ಲಾ ಕುಟುಂಬಗಳನ್ನು ಸೂಕ್ತವಾಗಿ ಪುನರ್ವಸತಿ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ದಾಳಿಗೆ ನೇರವಾಗಿ ಕೇಂದ್ರ ಸರ್ಕಾರವೇ ಕಾರಣ ಎಂಬುದನ್ನು ಈ ಟ್ವೀಟ್ ಮೂಲಕ ಅವರು ಟೀಕಿಸಿದ್ದಾರೆ. ಕೇಂದ್ರ ಗುಪ್ತಚರ ವೈಫಲ್ಯದಿಂದಾಗಿ ನಾವು 40 ಸಿಆರ್‌ಪಿಎಫ್ ಯೋಧರನ್ನು ಕಳೆದುಕೊಳ್ಳಬೇಕಾಯಿತು ಎಂಬುದು ಅವರು ಟ್ವೀಟ್ ತಾತ್ಪರ್ಯವಾಗಿದೆ. ಈಗ ದಿಗ್ವಿಜಯ್ ಸಿಂಗ್ ಅವರ ಈ ಟ್ವೀಟ್ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ.
ಇದನ್ನೂ ಓದಿ: Pulwama Attack: ಪುಲ್ವಾಮಾ ದಾಳಿ ಕರಾಳ ನೆನಪು; ಯೋಧರ ಬಲಿದಾನವೇ ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರಣ ಎಂದ ಪ್ರಧಾನಿ ಮೋದಿ
ಕಳದೆ ನಾಲ್ಕು ವರ್ಷಗಳಿಂದಲೂ ಪುಲ್ವಾಮಾ ಉಗ್ರ ದಾಳಿ ಕುರಿತು ವಿವಾದ, ವಾಗ್ವಾದಗಳು ನಡೆದೇ ಇವೆ. 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕವನ್ನು ತಂದಿದ್ದು ಹೇಗೆ, ಇದು ಗುಪ್ತಚರ ಸಂಪೂರ್ಣ ವೈಫಲ್ಯ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಹಾಗೆಯೇ ಪ್ರತಿ ವರ್ಷವೂ ಈ ಕುರಿತು ವಿವಾದ ನಡೆದೇ ಇರುತ್ತದೆ.