Site icon Vistara News

ADR report: ಶೇ.40 ಸಂಸದರ ವಿರುದ್ಧ ಕ್ರಿಮಿನಲ್ ಕೇಸ್, ಕೇರಳ ಸಂಸದರಿಗೆ ಅಗ್ರಸ್ಥಾನ!

Parliament's Winter Session

ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ ಸಂಸತ್ತಿನ 763 ಸದಸ್ಯರಲ್ಲಿ (MPs), 306 ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ(Criminal Cases). ಅಂದರೆ, ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದಸ ಪ್ರಮಾಣ ಶೇ.40ರಷ್ಟಿದೆ ಎಂದಾಯಿತು. ಕಳೆದ ಚುನಾವಣೆಯಲ್ಲಿ ಈ ಸಂಸದರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳ (Affidavit) ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ(ADR report).

ಕೊಲೆ, ಕೊಲೆಯ ಯತ್ನ, ಅಪಹರಣ, ಮಹಿಳೆಯರ ವಿರುದ್ದ ಕ್ರಿಮಿನಲ್ ಪ್ರಕರಣ ಸೇರಿದಂತೆ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ 194(ಶೇ.25) ಸಂಸದರು ಹೇಳಿಕೊಂಡಿದ್ದಾರೆ. ಕ್ರಿಮಿನಲ್ ಕೇಸ್‌ ಎದುರಿಸುತ್ತಿರುವ ಸಂಸದರ ಪೈಕಿ ಕೇರಳ ಸಂಸದರು ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಸ್ವಯಂ ಪ್ರಮಾಣ ಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ ಸಂಸದರ ಪಟ್ಟಿಯಲ್ಲಿ ಕೇರಳ (73%) ಅಗ್ರಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಬಿಹಾರ, ಮಹಾರಾಷ್ಟ್ರ (57%) ಮತ್ತು ತೆಲಂಗಾಣ (50%) ರಾಜ್ಯಗಳಿವೆ.

ಯಾವ ಪಾರ್ಟಿಯಲ್ಲಿ ಎಷ್ಟು?

ಪಕ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ, ಭಾರತೀಯ ಜನತಾ ಪಕ್ಷದ 385 ಸಂಸದರಲ್ಲಿ 139 (36%), ಕಾಂಗ್ರೆಸ್‌ನ 81 ಸಂಸದರಲ್ಲಿ 43 (53%), ತೃಣಮೂಲದ 36 ಸಂಸದರಲ್ಲಿ 14 (39%) ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯಿಂದ 6 ಸಂಸದರಲ್ಲಿ 5 (83%), ಸಿಪಿಎಂ 8 ಸಂಸದರ ಪೈಕಿ 6, ಆಮ್ ಆದ್ಮಿ ಪಕ್ಷದ (ಎಎಪಿ) 11 ಸಂಸದರಲ್ಲಿ ಮೂವರು, ವೈಎಸ್‌ಆರ್‌ಪಿ ಪಕ್ಷದ 31 ಸಂಸದರಲ್ಲಿ 13 (42%) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 8 ಸಂಸದರಲ್ಲಿ 3 (38%) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಫಿಡ್‌ವಿಟ್‌ಗಳಲ್ಲಿ ಘೋಷಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rajya Sabha: ರಾಜ್ಯಸಭೆಯ ಶೇ.12 ಸದಸ್ಯರು ಕೋಟ್ಯಧಿಪತಿಗಳು! ಯಾರ ವಿರುದ್ಧ ಕ್ರಿಮಿನಲ್ ಕೇಸ್‌ಗಳಿವೆ?

ಸಲ್ಲಿಸಿದ ಅಫಿಡವಿಟ್‌ಗಳ ಪ್ರಕಾರ, 32 ಸಂಸದರು ‘ಕೊಲೆ ಯತ್ನ’ (ಐಪಿಸಿ ಸೆಕ್ಷನ್ 307) ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 21 ಸಂಸದರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣಗಳಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version