Site icon Vistara News

Teacher Marries Student | 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ 42ರ ಶಿಕ್ಷಕ, ವಿಡಿಯೊ ವೈರಲ್‌

Teacher Marries Student

ಪಟನಾ: ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಪ್ರೀತಿ ಮಾಡಲು ವಯಸ್ಸಿನ ಹಂಗೂ ಇಲ್ಲ ಎಂಬ ಮಾತಿದೆ. ಇಂತಹ ಮಾತುಗಳಿಗೆ ನಿದರ್ಶನ ಎಂಬಂತೆ ಬಿಹಾರದಲ್ಲಿ ೪೨ ವರ್ಷದ ಶಿಕ್ಷಕರೊಬ್ಬರು ೨೦ ವರ್ಷದ ವಿದ್ಯಾರ್ಥಿನಿಯನ್ನು (Teacher Marries Student) ಮದುವೆಯಾಗಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ಸಂಗೀತ್‌ ಕುಮಾರ್‌ ಅವರು ಇಂಗ್ಲಿಷ್‌ ಟ್ಯೂಷನ್‌ ಕ್ಲಾಸ್‌ ತೆಗೆದುಕೊಳ್ಳುತ್ತಾರೆ. ಇವರ ಕೋಚಿಂಗ್‌ ಕ್ಲಾಸ್‌ಗೆ ಟ್ಯೂಷನ್‌ಗೆ ಬರುವ ೨೦ ವರ್ಷದ ಶ್ವೇತಾ ಕುಮಾರಿ ಅವರಿಗೆ ಸಂಗೀತ್‌ ಕುಮಾರ್‌ ಮೇಲೆ ಪ್ರೀತಿಯಾಗಿದೆ. ಸಂಗೀತ್‌ ಕುಮಾರ್‌ ಅವರಿಗೂ ಶ್ವೇತಾ ಹಿಡಿಸಿದ್ದಾರೆ. ಕೊನೆಗೆ ಇಬ್ಬರೂ ಮದುವೆಯಾಗಲು ತೀರ್ಮಾನಿಸಿ, ಅದರಂತೆ ಕೆಲ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ವಯಸ್ಸಿನ ಅಂತರ, ಗುರು-ಶಿಷ್ಯರು ಎಂಬುದನ್ನೂ ಮೀರಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಸಪ್ತಪದಿ ತುಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಬ್ಬರ ಮಧ್ಯೆ ೨೨ ವರ್ಷದ ಅಂತರವಿದ್ದರೂ, ಮನಸ್ಸುಗಳು ಬೆರೆತಿವೆ ಎಂಬುದು ಸೇರಿ ಹಲವು ರೀತಿಯಲ್ಲಿ ಜನ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ನ್ಯಾಯಾಲಯದಿಂದ ಮದುವೆ ಪ್ರಮಾಣಪತ್ರವನ್ನೂ ಪಡೆದಿದ್ದಾರೆ. ಕೆಲ ವರ್ಷದ ಹಿಂದೆ ಸಂಗೀತ್‌ ಕುಮಾರ್‌ ಅವರ ಪತ್ನಿ ತೀರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Imran Khan Wife | ದುಬಾರಿ ವಾಚ್‌ ಮಾರಿ ಜೀವನ ಸಾಗಿಸುವ ಗತಿ ಬಂತೇ ಇಮ್ರಾನ್‌ ಖಾನ್‌ಗೆ? ಪತ್ನಿ ಆಡಿಯೊ ವೈರಲ್

Exit mobile version