ಲಖನೌ: ಪ್ರೀತಿಗೆ ಜಾತಿ, ಧರ್ಮ, ಸೌಂದರ್ಯ, ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಪ್ರೀತಿಗೆ ಪಕ್ಷದ ಹಂಗಿಲ್ಲ ಎಂಬುದನ್ನು ಬಿಜೆಪಿ ಮುಖಂಡರೊಬ್ಬರು (BJP Leader Love Story) ತೋರಿಸಿಕೊಟ್ಟಿದ್ದಾರೆ. ಹೌದು, ಉತ್ತರ ಪ್ರದೇಶದ ಹರ್ದೋಯಿ ಬಿಜೆಪಿ ಮುಖಂಡರೊಬ್ಬರು ಸಮಾಜವಾದಿ ಪಕ್ಷದ ನಾಯಕರೊಬ್ಬರ ಪುತ್ರಿ ಜತೆ ಓಡಿಹೋಗಿದ್ದಾರೆ.
ಹರ್ದೋಯಿ ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ, 47 ವರ್ಷದ ಆಶಿಶ್ ಶುಕ್ಲಾ ಅವರು ಸಮಾಜವಾದಿ ಪಕ್ಷದ ನಾಯಕರೊಬ್ಬರ 26 ವರ್ಷದ ಪುತ್ರಿ ಜತೆ ಪರಾರಿಯಾಗಿದ್ದಾರೆ. ಆದರೆ, ಶುಕ್ಲಾ ಅವರಿಗೆ ಈಗಾಗಲೇ ಮದುವೆಯಾಗಿದ್ದು, 21 ವರ್ಷದ ಪುತ್ರ ಹಾಗೂ 7 ವರ್ಷದ ಪುತ್ರಿ ಇದ್ದಾರೆ.
ಎಸ್‌ಪಿ ನಾಯಕರೊಬ್ಬರ ಪುತ್ರಿ ಹಾಗೂ ಆಶಿಶ್ ಶುಕ್ಲಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗಷ್ಟೇ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಇದರಿಂದ ಇಬ್ಬರೂ ವಿಚಲಿತರಾಗಿದ್ದು, ಕೊನೆಗೆ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಯುವತಿಯ ತಂದೆಯು ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿಯಿಂದ ವಜಾ
ಆಶಿಶ್ ಶುಕ್ಲಾ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಬಿಜೆಪಿಯು ಅವರನ್ನು ವಜಾಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆ ಕೈಗೊಂಡ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ಹರ್ದೋಯಿ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Javed Akthar | ಪತ್ನಿಯಿದ್ದರೂ ನಟಿಯ ಪ್ರೀತಿಯಲ್ಲಿ ಬಿದ್ದಿದ್ದ ಜಾವೇದ್; ಚಿತ್ರ ಸಾಹಿತಿ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು ಇಲ್ಲಿವೆ…