ನವ ದೆಹಲಿ: ವಯಾಗ್ರ (ಹಿಮಾಲಯನ್ ವಯಾಗ್ರ) ಹುಡುಕಿಕೊಂಡು ಹಿಮಾಲಯಕ್ಕೆ ಹೋದ 5ಮಂದಿ ನಾಪತ್ತೆಯಾಗಿದ್ದಾರೆ. ಕಾಮೋತ್ತೇಜಕವಾದ ಯಾರ್ಸಗುಂಬಾ ಅಥವಾ ಹಿಮಾಲಯನ್ ವಯಾಗ್ರವನ್ನು ತರಲು ಇವರೆಲ್ಲ ಹೋಗಿದ್ದರು. ಆದರೀಗ ಎಲ್ಲಿಯೂ ಕಾಣಿಸುತ್ತಿಲ್ಲ. ಎಲ್ಲರೂ ಹಿಮಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ನೇಪಾಳದ ದರ್ಚುಲಾ ಜಿಲ್ಲೆಯ ಬಾಲಿನ್ನಲ್ಲಿರುವ ಬ್ಯಾನ್ಸ್ ಹಳ್ಳಿಯ ಕೌನ್ಸಿಲ್-01ರಲ್ಲಿ ಮಂಗಳವಾರ ತಡರಾತ್ರಿ 3ಗಂಟೆ ಹೊತ್ತಿಗೆ ತೀವ್ರ ಹಿಮಪಾತವಾಗಿದೆ. ಅದರಲ್ಲಿ ಈ ಐವರೂ ಸಿಲುಕಿ, ಕಣ್ಮೆರೆಯಾಗಿದ್ದಾರೆ ಎಂದು ರಕ್ಷಣಾ ತಂಡಗಳೂ ಹೇಳಿವೆ. ಯೋಧರು, ಸ್ಥಳೀಯ ಪೊಲೀಸ್ ತಂಡಗಳು ಆ ಹಳ್ಳಿಯ ಸಮೀಪ ಬೀಡುಬಿಟ್ಟಿದ್ದು, ನಾಪತ್ತೆಯಾದವರನ್ನು ಹುಡುಕುತ್ತ, ಹಿಮಕುಸಿತದಲ್ಲಿ ಸಿಲುಕಿದವರನ್ನು ರಕ್ಷಿಸುತ್ತಿದ್ದಾರೆ.
ಹಿಮಾಲಯನ್ ವಯಾಗ್ರ ಹುಡುಕಿಕೊಂಡು ಹೋದ ತಂಡದಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದ. ಅಲ್ಲಿನ ವಾತಾವರಣವೂ ಚೆನ್ನಾಗಿಯೇ ಇತ್ತು. ಈ ಸ್ಥಳದಲ್ಲಿ ಭಾರತೀಯ ಸಶಸ್ತ್ರ ಪೊಲೀಸ್ ಪಡೆ ಜತೆ ನೇಪಾಳ ಪೊಲೀಸ್ ತಂಡವೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 80 ಸಿಬ್ಬಂದಿ ಇದ್ದಾರೆ ಎಂದ ದರ್ಚುಲಾ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಪ್ರದೀಪ್ ಸಿಂಗ್ ಧಾಮಿ ಹೇಳಿದ್ದಾರೆ.
ಇದನ್ನೂ ಓದಿ: ಸ್ನೇಹಿತೆಯೊಂದಿಗೆ ಹೋಟೆಲ್ನಲ್ಲಿ ತಂಗಿದ್ದವ, ಮದ್ಯ ದೊಂದಿಗೆ ವಯಾಗ್ರ ಮಾತ್ರೆ ಸೇವಿಸಿ ಸಾವು; ವೈದ್ಯರು ನೀಡಿದ ಎಚ್ಚರಿಕೆ ಏನು?
ಇದೀಗ ಹಿಮಾಲಯನ್ ವಯಾಗ್ರ ಹುಲ್ಲಿನ ಸುಗ್ಗಿ ಕಾಲ ಆಗಿದ್ದರಿಂದ ಅನೇಕಾನೇಕರು ಗುಂಪುಗುಂಪಾಗಿ ಅದನ್ನು ಹುಡುಕಿಕೊಂಡು ಹಿಮಾಲಯದ ಬೆಟ್ಟಗಳನ್ನು ಹತ್ತುತ್ತಾರೆ. ಅವರು ಹೀಗೆ ವಾರಗಳ ಕಾಲ ಅಲ್ಲೆಲ್ಲ ಹುಡುಕುತ್ತಾರೆ. ಅಲ್ಲಿಂದ ತಂದ ಹಿಮಾಲಯನ್ ವಯಾಗ್ರ ಅಥವಾ ಯಾಸರ್ಗುಂಬಾವನ್ನು ಬೇರೆಯವರಿಗೆ ಒಳ್ಳೆ ಬೆಲೆಯಲ್ಲಿ ಮಾರಾಟ ಮಾಡುವುದು ಅವರ ಉದ್ದೇಶವಾಗಿರುತ್ತದೆ. ಯಾಸರ್ಗುಂಬಾ ಬರೀ ಕಾಮೋತ್ತೇಜಕವಷ್ಟೇ ಅಲ್ಲದೆ, ಹಲವು ಬಗೆಯ ಆರೋಗ್ಯ ಉಪಯೋಗಗಳನ್ನು ಹೊಂದಿದೆ. ಸಾಮಾನ್ಯವಾಗಿ ಭಾರತ, ನೇಪಾಳ, ಭೂತಾನ್ಗಳ ಮಧ್ಯೆ, ಸಮುದ್ರಮಟ್ಟದಿಂದ 3000-5000 ಮೀಟರ್ ಎತ್ತರದಲ್ಲಿ ಇದು ಸಿಗುತ್ತದೆ.