ಅಮ್ರೇಲಿ: ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಶನಿವಾರ ಚಿರತೆಯೊಂದು 5 ವರ್ಷದ (Leopard Attack) ಬಾಲಕಿಯನ್ನು ಕೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 10:30 ರ ಸುಮಾರಿಗೆ ಪನಿಯಾದೇವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವಲಯ ಅರಣ್ಯ ಅಧಿಕಾರಿ ಜ್ಯೋತಿ ವಾಜಾ ತಿಳಿಸಿದ್ದಾರೆ.
ಬಾಲಕಿ ಕೃಷಿ ಕಾರ್ಮಿಕರ ಮಗಳು. ಅವಳು ಹೊಲದಲ್ಲಿ ಆಟವಾಡುತ್ತಿದ್ದಾಗ ಚಿರತೆ ಅವಳ ಮೇಲೆ ಹಾರಿತು. ಆಕೆಯ ಪೋಷಕರು ಮತ್ತು ಇತರರು ಎಚ್ಚರಿಕೆ ನೀಡಿದರು. ಇದರ ಪರಿಣಾಮವಾಗಿ ಚಿರತೆ ಅವಳನ್ನು ಬಿಟ್ಟು ಓಡಿಹೋಯಿತು. ಆದರೆ, ಕುತ್ತಿಗೆಗೆ ತೀವ್ರವಾದ ಗಾಯಗಳಾಗಿದ್ದರಿಂದ ಅವಳು ಮೃತಪಟ್ಟಳು ಎಂದು” ಎಂದು ಜ್ಯೋತಿ ವಾಜಾ ಹೇಳಿದರು.
“ಜನರು ಮಾಂಸವನ್ನು ಸೇವಿಸುತ್ತಾರೆ ಮತ್ತು ಅದರ ತ್ಯಾಜ್ಯ ಭಾಗಗಳನ್ನು ಹೊರಗೆ ಎಸೆಯುತ್ತಾರೆ. ಇದು ಚಿರತೆಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತದೆ. ಇದರ ಪರಿಣಾಮವಾಗಿ ಇಂತಹ ದಾಳಿಗಳು ಸಂಭವಿಸುತ್ತವೆ. ಮಾಂಸಾಹಾರಿ ಆಹಾರವನ್ನು ಈ ರೀತಿ ಬಿಡುವುದರ ಬಗ್ಗೆ ನಾವು ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ. ಅಮ್ರೇಲಿ ಜಿಲ್ಲೆಯಲ್ಲಿ ಚಿರತೆ ದಾಳಿಯಲ್ಲಿ ಹಲವಾರು ಸಾವುಗಳು ಸಂಭವಿಸಿವೆ. ಅಕ್ಟೋಬರ್ 14 ರಂದು ತಲಾಲಾದ ವಡಾಲಾ ಗ್ರಾಮದಲ್ಲಿ ಮಹಿಳೆಯನ್ನು ಚಿರತೆಯೊಂದು ಕೊಂದಿತ್ತು.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಪೀಠೋಪಕರಣ ಉದ್ಯಮಿ ಸೇರಿದಂತೆ ಒಂದೇ ಕಟುಂಬದ ಏಳು ಮಂದಿ ಆತ್ಮಹತ್ಯೆ (Self-Harming) ಮಾಡಿಕೊಂಡ ಘಟನೆ ಇಲ್ಲಿನ ಪಾಲನ್ಪುರ್ ಜಕತ್ನಾಕಾದಲ್ಲಿ ಶನಿವಾರ ನಡೆದಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳೂ ಇದ್ದಾರೆ. ಘಟನೆ ಬಳಿಕ ಸ್ಥಳೀಯವಾಗಿ ಆತಂಕ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯನ್ನು ಮನೀಶ್ ಸೋಲಂಕಿ ಎಂದು ಗುರುತಿಸಲಾಗಿದೆ. ಪತ್ನಿ ರೀಟಾ, ತಂದೆ ಕಾನು, ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯಾ ಮತ್ತು ಕುಶಾಲ್ ಆತ್ಮಹತ್ಯೆ ಮಾಡಿಕೊಂಡವರು . ಸಾಮೂಹಿಕ ಆತ್ಮಹತ್ಯೆ ನಡೆದ ಅದಾಜನ್ ಪ್ರದೇಶದ ಸಿದ್ದೇಶ್ವರ್ ಅಪಾರ್ಟ್ಮೆಂಟ್ನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸೋಲಂಕಿ ಅವರೊಂದಿಗೆ ಸುಮಾರು 25 ಬಡಗಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳದ್ದಾರೆ. ಈ ಕಾರ್ಮಿಕರು ಶನಿವಾರ ಬೆಳಿಗ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರು ಫೋನ್ ಕರೆಗೆ ಉತ್ತರಿಸಿರಲಿಲ್ಲ. ಅವರ ಮನೆಗೆ ಹೋದಾಗಲೂ ಬಾಗಿಲು ತೆರೆಯಲಿಲ್ಲ. ಸ್ಥಳೀಯ ನಿವಾಸಿಗಳು ಮನೆಯ ಹಿಂಭಾಗದ ಕಿಟಕಿಯನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದರು. ವೇಳೆ ಆತ್ಮಹತ್ಯೆ ಮಾಹಿತಿ ಗೊತ್ತಾಗಿದೆ.
ಪೊಲೀಸರು ಇನ್ನೂ ಆತ್ಮಹತ್ಯೆಗೆ ನಿಖರವಾದ ವಿವರಗಳನ್ನು ಹೇಳಿಲ್ಲ. ಆದರೆ ಅವರು ಮನೆಯಿಂದ ಡೆತ್ನೋಟ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಸೋಲಂಕಿ ತಾವು ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದರೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಹೇಳಲಾಗಿದೆ. ಸೋಲಂಕಿ ಪೀಠೋಪಕರಣಗಳ ಸರಬರಾಜು ಮಾಡಲು ಕೆಲವು ದೊಡ್ಡ ಒಪ್ಪಂದಗಳನ್ನು ಹೊಂದಿದ್ದರು. ಆದರೆ ದೀರ್ಘಕಾಲದಿಂದ ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ತಲುಪಿದ ಕುಟುಂಬದ ಸಂಬಂಧಿಕರು ಯಾವುದೇ ವಿವರಗಳನ್ನು ನೀಡಿಲ್ಲ.