Site icon Vistara News

ಮಹಾರಾಷ್ಟ್ರದ ಮಹಿಳೆಯರಿಗೆ ಗುಡ್​ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ; ಇಂದಿನಿಂದಲೇ ಅನ್ವಯ ಆಗಲಿದೆ ಹೊಸ ಯೋಜನೆ

50 Percent concession for women in Maharashtra State Run Buses

#image_title

ಮುಂಬಯಿ: ಮಹಾರಾಷ್ಟ್ರ ರಾಜ್ಯ ಸರ್ಕಾರ (Maharashtra Government) ಮಹಿಳೆಯರಿಗೆ ಒಂದು ವಿಶೇಷ ಕೊಡುಗೆ ನೀಡಿದೆ. ಅಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್​​ಗಳಲ್ಲಿ ಮಹಿಳೆಯರಿಗೆ ಟಿಕೆಟ್​ ದರಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಮಾರ್ಚ್​ 17 ಅಂದರೆ ಇಂದಿನಿಂದಲೇ ಈ ಅನುಕೂಲ ಮಹಿಳೆಯರಿಗೆ ಲಭಿಸಲಿದೆ. ‘ಮಹಿಳಾ ಸಮ್ಮಾನ್ ಯೋಜನೆಯನ್ನು ವಿಸ್ತರಿಸಿ, ಮಹಿಳೆಯರಿಗೆ ಟಿಕೆಟ್​ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಈ ಹಣವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಕ್ಕೆ ಮರುಪಾವತಿ ಮಾಡಲಿದೆ.

ಮಹಿಳಾ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಟಿಕೆಟ್​ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಮಾರ್ಚ್​ 9ರಂದು ಬಜೆಟ್​ ಮಂಡನೆ ವೇಳೆ ಹಣಕಾಸು ಸಚಿವ/ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಣೆ ಮಾಡಿದ್ದರು. ಅದು ಇಂದಿನಿಂದ ಜಾರಿಯಾಗಲಿದೆ. ಅಂದಹಾಗೇ, ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದಿಂದ ಪ್ರತಿದಿನ 15 ಸಾವಿರಕ್ಕೂ ಅಧಿಕ ಬಸ್​ಗಳು ಸಂಚರಿಸುತ್ತವೆ. ಏನಿಲ್ಲವೆಂದರೂ ಒಂದು ದಿನಕ್ಕೆ 50 ಲಕ್ಷ ಪ್ರಯಾಣಿಕರು ಬಸ್​​ನಲ್ಲಿ ಪ್ರಯಾಣ ಮಾಡುತ್ತಾರೆ.

ಇದನ್ನೂ ಓದಿ: Border Dispute: ಅಮಿತ್‌ ಶಾ ಸಂಧಾನ ಸಭೆ ನಿರ್ಣಯದ ಉಲ್ಲಂಘನೆಯಾಗಿದೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಎಂ ಬೊಮ್ಮಾಯಿ ಆಕ್ರೋಶ

ಇದೀಗ ಮಹಿಳೆಯರಿಗೆ ಟಿಕೆಟ್​ ದರದಲ್ಲಿ ವಿನಾಯಿತಿ ಸಿಕ್ಕಿದ್ದು, ದಿನಕ್ಕೆ ಎಷ್ಟು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ. ಶೇ.35ರಿಂದ 40ರಷ್ಟು ಮಹಿಳೆಯರು ಬಸ್​​ನಲ್ಲಿ ಪ್ರಯಾಣ ಮಾಡಬಹುದು ಎಂಬ ಅಂದಾಜಿದೆಯಷ್ಟೇ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಹಾಗೇ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ, 75ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಬಸ್​ಗಳಲ್ಲಿ ಶೇ.100ರಷ್ಟು ಮತ್ತು 65-74ವರ್ಷದವರಿಗೆ ಶೇ.50ರಷ್ಟು ವಿನಾಯಿತಿಯನ್ನು ಈಗಾಗಲೇ ಘೋಷಣೆ ಮಾಡಿದೆ.

Exit mobile version