ನವದೆಹಲಿ: ಪಂಜಾಬ್ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಈ ಬಗ್ಗೆ ‘ಕೂ’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬರೆದುಕೊಂಡಿರುವ ಅವರು, ‘ಪಂಜಾಬ್‌ನ ಹಿತದೃಷ್ಟಿಯಿಂದ ಬಹಳ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಪಂಜಾಬ್ ಇತಿಹಾಸದಲ್ಲೇ ಇದುವರೆಗೆ ಯಾರೂ ಇಂತಹ ನಿರ್ಧಾರವನ್ನು ತೆಗೆದುಕೊಂಡಿರಲಾರರು. ಶೀಘ್ರದಲ್ಲೇ ಅದನ್ನು ನಾನು ಘೋಷಿಸುತ್ತೇನೆ’ ಎಂದು ಪಂಜಾಬ್ ನೂತನ ಸಿಎಂ ಭಗವಂತ್ ಮಾನ್ ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾಡಿರುವ ಪೋಸ್ಟ್ ಸದ್ಯ ತೀವ್ರ ಚರ್ಚೆಗೆ ಕಾರಣವಾಗಿದೆ. ಪಂಜಾಬ್‌ನ ಹಿತದೃಷ್ಟಿಯಿಂದ ಭಗವಂತ್ ಮಾನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಮಾರ್ಚ್ ೧೬ರಂದು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಅವರು ಭಗತ್ ಸಿಂಗ್ ಪೂರ್ವಜರ ಹುಟ್ಟೂರು ಖಟಕಡ್ ಕಲಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.