ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನವು (Gujarat Election) ಗುರುವಾರ ಶಾಂತಿಯುತವಾಗಿ ನಡೆದಿದೆ. ದಿನದ ಅಂತ್ಯಕ್ಕೆ ಶೇ.೫೭ ರಷ್ಟು ಮತದಾನ ದಾಖಲಾಗಿದ್ದು, ೧೯ ಜಿಲ್ಲೆಗಳ ೮೯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.
ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಆದರೆ, ಮಧ್ಯಾಹ್ನವಾಗುತ್ತಲೇ ಮತಗಟ್ಟೆಗಳತ್ತ ಜನರ ಆಗಮನ ಕಡಿಮೆಯಾಯಿತು. ಸಂಜೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಮತದಾನ ಪ್ರಮಾಣವು ಶೇ.೫೭ಕ್ಕೆ ಸೀಮಿತವಾಯಿತು.
ತಪಿ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ತಪಿಯಲ್ಲಿ ಶೇ.೭೨.೩೨ರಷ್ಟು, ನರ್ಮದಾ ೬೮.೦೯, ನವಸಾರಿ ೬೫.೯೧, ಭರೂಚ್‌ನಲ್ಲಿ ಶೇ.೬೩.೦೮ರಷ್ಟು ಮತದಾನ ದಾಖಲಾಯಿತು. ಎರಡನೇ ಅಥವಾ ಕೊನೆಯ ಹಂತದ ಮತದಾನವು ಡಿಸೆಂಬರ್ ೫ರಂದು ನಡೆಯಲಿದ್ದು, ೯೩ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಎದೆಬಡಿತ ಜಾಸ್ತಿಯಾಗಿದೆ. ಡಿಸೆಂಬರ್ ೮ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ | Gujarat Election | ಪ್ರಧಾನಿಗೆ ನಿಂದಿಸಲು ಸ್ಪರ್ಧೆಗೆ ಬಿದ್ದಿದ್ದಾರೆ ಕಾಂಗ್ರೆಸಿಗರು! ಖರ್ಗೆ ‘ರಾವಣ’ ಹೇಳಿಕೆಗೆ ಮೋದಿ ತಿರುಗೇಟು!