Site icon Vistara News

Turkey Earthquake: ಟರ್ಕಿಯಲ್ಲಿ ಮತ್ತೆ ಭೂಕಂಪ, 6.3 ತೀವ್ರತೆ ದಾಖಲು, ಧರೆಗುರುಳಿದ ಕಟ್ಟಡಗಳು

6.3 Magnitude Earthquake Strikes Near Turkey-Syria Border Region

Turkey Earthquake

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪಕ್ಕೆ (Turkey Earthquake) ಲಕ್ಷಾಂತರ ಜನ ತತ್ತರಿಸಿಹೋಗಿದ್ದಾರೆ. ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ೪೬ ಸಾವಿರ ದಾಟಿದೆ. ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ ೬.೩ ತೀವ್ರತೆ ದಾಖಲಾಗಿದೆ.

ತೀವ್ರ ಪ್ರಮಾಣದ ಭೂಕಂಪದಿಂದ ಹತಾಯ್‌ ಪ್ರಾಂತ್ಯದ ಅಂತಕ್ಯಾ ಪ್ರದೇಶದಲ್ಲಿ ಮತ್ತೆ ಕಟ್ಟಡಗಳು ಕುಸಿದಿವೆ. ಎರಡು ದಿನಗಳ ಹಿಂದಷ್ಟೇ ಎರಡು ಪ್ರಬಲ ಭೂಕಂಪದಿಂದ ನಗರವು ಬೆಚ್ಚಿಬಿದ್ದಿತ್ತು. ಇದರ ಬೆನ್ನಲ್ಲೇ ಪ್ರದೇಶದ ಸುತ್ತಮುತ್ತ ಮತ್ತೊಂದು ಭಾರಿ ಭೂಕಂಪ ಸಂಭವಿಸಿದೆ. ತೀವ್ರ ಪ್ರಮಾಣದ ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದರೂ, ಇದುವರೆಗೆ ಸಾವಿನ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಭೂಕಂಪದ ತೀವ್ರತೆಯ ಭಯಂಕರ ದೃಶ್ಯ

“ನನ್ನ ಕಾಲಡಿಯಲ್ಲಿ ಭೂಮಿ ಬಿರುಕು ಬಿಡುತ್ತಿದೆಯೇನೋ ಅನಿಸುವಷ್ಟರಮಟ್ಟಿಗೆ ಭೂಮಿ ನಲುಗಿತು. ನನ್ನ ಏಳು ವರ್ಷದ ಮಗಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಓಡಿಬಂದೆವು” ಎಂದು ಅಂತಕ್ಯಾ ನಗರದ ನಿವಾಸಿ ಮುನಾ ಅಲ್‌ ಉಮರ್‌ ಎಂಬ ಮಹಿಳೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Turkey Syria Earthquake : ಭೂಕಂಪನಕ್ಕೆ ಸಾವನ್ನಪ್ಪಿದವರ ಸಂಖ್ಯೆ 45,000ಕ್ಕೆ ಏರಿಕೆ; ಇನ್ನೂ ಪತ್ತೆಯಾಗಿಲ್ಲ ಸಾವಿರಾರು ಮಂದಿ

Exit mobile version