Site icon Vistara News

Road Accident | ಟೈರ್‌ ಸ್ಫೋಟಗೊಂಡು ಬಸ್‌ ಸ್ಟಾಪ್‌ ಬಳಿ ನಿಂತವರ ಮೇಲೆ ಹರಿದ ಟ್ರಕ್‌, 6 ಜನರ ಸಾವು

Road Accident

ಭೋಪಾಲ್‌: ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯಲ್ಲಿ ಬಸ್‌ ನಿಲ್ದಾಣದ ಬಳಿ ನಿಂತಿದ್ದ ಜನರ ಮೇಲೆ ಟ್ರಕ್‌ (Road Accident) ಹರಿದಿದ್ದು, ಆರು ಜನ ಮೃತಪಟ್ಟಿದ್ದಾರೆ. ಹಾಗೆಯೇ, 12 ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರತ್ಲಾಮ್‌-ಲೆಬಾದ್‌ ರಸ್ತೆಯ ಸತ್ರುಂಡ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನ ಟೈರ್‌ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್‌ ನಿಲ್ದಾಣದ ಬಳಿ ನಿಂತಿದ್ದ ಜನರ ಮೇಲ್‌ ಟ್ರಕ್‌ ಹರಿದಿದೆ. ರತ್ಲಾಮ್‌ನಿಂದ ಬಡ್ನಾವರ್‌ಗೆ ಟ್ರಕ್‌ ಹೊರಟಿತ್ತು ಎಂದು ತಿಳಿದುಬಂದಿದೆ.

“ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನ ಟೈರ್‌ ಸ್ಫೋಟಗೊಂಡಿದೆ. ಅಪಘಾತ ಸಂಭವಿಸುತ್ತಲೇ ಸ್ಥಳಿಯರು ಜನರನ್ನು ರಕ್ಷಿಸಿದ್ದಾರೆ. 12 ಗಾಯಾಳುಗಳಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಅಪಘಾತ ಉಂಟಾದ ಸ್ಥಳದಿಂದ ಟ್ರಕ್‌ ಚಾಲಕ ಪರಾರಿಯಾಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | Man Kills Wife | ಇನ್ಶುರೆನ್ಸ್‌ನ 1.9 ಕೋಟಿ ರೂ.ಗಾಗಿ ಹೆಂಡತಿಯನ್ನೇ ಅಪಘಾತದಲ್ಲಿ ಕೊಲ್ಲಿಸಿದ!

Exit mobile version