Site icon Vistara News

ಕ್ಯಾಂಡಲ್ ಫ್ಯಾಕ್ಟರಿ ಅಗ್ನಿ ಅನಾಹುತಕ್ಕೆ 6 ಮಂದಿ ಸಾವು, 8 ಮಂದಿಗೆ ಗಾಯ

6 people dead in candle factory fire incident

ಪುಣೆ: ಹೊಳೆಯುವ ಮೇಣದ ಬತ್ತಿ ಫ್ಯಾಕ್ಟರಿಯಲ್ಲಿ (sparkling candle Factory) ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Incident) 6 ಮೃತಪಟ್ಟು, 8 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ (Pune District) ಪಿಂಪ್ರಿ ಚಿಂಚವಾಡಾ (Pimpri Chinchwad) ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 2.45 ರ ಸುಮಾರಿಗೆ ತಲವಾಡೆಯಲ್ಲಿರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದೆ ಎಂದು ಪಿಂಪ್ರಿ-ಚಿಂಚವಾಡ ಪುರಸಭೆಯ ಆಯುಕ್ತ ಶೇಖರ್ ಸಿಂಗ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಗ್ನಿ ಅನಾಹುತಕ್ಕೀಡಾಗಿರುವ ಫ್ಯಾಕ್ಟರಿಯಲ್ಲಿ ಹೊಳೆಯುವ ಮೇಣದಬತ್ತಿಗಳನ್ನು ತಯಾರಿಸಲಾಗುತ್ತಿದೆ. ಈ ಮೊಂಬತ್ತಿಗಳನ್ನು ಸಾಮಾನ್ಯವಾಗಿ ಬರ್ತೇಡ್ ಸಂಭ್ರಮಾಚರಣೆಯಲ್ಲಿ ಬಳಸಲಾಗುತ್ತದೆ ಎಂದು ಪಿಂಪರಿ ಚಿಂಚವಾಡಾ ಮುನ್ಸಿಪಲ್ ಕಮಿಷನರ್ ಶೇಖರ್ ಸಿಂಗ್ ಅವರು ಹೇಳಿದ್ದಾರೆ.

ಫ್ಯಾಕ್ಟರಿಗೆ ತಗುಲಿದ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಏನೂ ಎಂದು ಎಂಬುದು ಇದುವರೆಗೂ ಗೊತ್ತಾಗುತ್ತಿಲ್ಲ ಶೇಖರ್ ಅವರು ಸಿಂಗ್ ಅವರು ತಿಳಿಸಿದ್ದಾರೆ. ಈ ಅಗ್ನಿ ಅನಾಹುತದಲ್ಲಿ ಗಾಯಗೊಂಡವರನ್ನು ಪುಣೆ ಮ್ತತು ಪಿಂಪ್ರಿ ಚಿಂಚವಾಡ ಕಾರೊಪೇಷನ್ ಪ್ರದೇಶದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲೂ ಕೆಲವು ದಿನಗಳ ಹಿಂದೆ ಪಟಾಕಿ ದಾಸ್ತಾನು ಕಟ್ಟಡಕ್ಕೆ ಬೆಂಕಿ ಬಿದ್ದಿತ್ತು. ಈ ಘಟನೆಲ್ಲಿ 17 ಜನರು ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Fire Tragedy : ದೀಪಾವಳಿ ಪೂಜೆ ವೇಳೆ ದುರಂತ; ಗಂಗೊಳ್ಳಿಯಲ್ಲಿ ಏಳು ಬೋಟ್‌ಗಳು ಬೆಂಕಿಗೆ ಆಹುತಿ

Exit mobile version