ಸಿಕ್ಕಿಂ: ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ (Sikkim Flash Flood) ಮೃತಪಟ್ಟ 19 ಜನರ ಪೈಕಿ 6 ಜನರು ಯೋಧರಿದ್ದಾರೆ. ಅಲ್ಲದೇ, 16 ಯೋಧರು (Indian Army Jawans) ಸೇರಿದಂತೆ ಒಟ್ಟು 100ಕ್ಕೂ ಅಧಿಕ ಮಂದೆ ಇನ್ನೂ ನಾಪತ್ತೆಯಾಗಿದ್ದು, 3000ಕ್ಕೂ ಹೆಚ್ಚು ಪ್ರವಾಸಿಗರು ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದಾರೆ(tourists are stranded). ಅಲ್ಲದೇ, 2,500 ಸಾವಿರ ಜನರನ್ನು ಸ್ಥಳಾಂತರಿಸಲಾಗಿದ್ದು, ಪರಿಹಾರ ಶಿಬಿರಗಳಿಗೆ 6 ಸಾವಿರ ಜನರು ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇಘಸ್ಫೋಟದಿಂದಾಗಿ (Cloud Burst) ಸಿಕ್ಕಿಂ ತತ್ತರಿಸಿ ಹೋಗಿದೆ. ಸಿಕ್ಕಿಂನ ಲ್ಹೋನಕ್ ಸರೋವರದ ನೀರು ಹರಿದು ಹೋದ್ದರಿಂದ ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ ಸೃಷ್ಟಿಯಾಯಿತು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಸೇವೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಮಾತನಾಡಿ, ಸಾವರ್ಜನಿಕರು ಅನಗತ್ಯ ಪ್ರಯಾಣ ಮಾಡದಿರುವಂತೆ ಮನವಿ ಮಾಡಿದ್ದಾರೆ. ಜತೆಗೆ ಸಿಕ್ಕಿಂ ಸರ್ಕಾರ ಹೆಲ್ಪ್‌ಲೈನ್ ನಂಬರ್‌ಗಳನ್ನು ಪ್ರಕಟಿಸಿದೆ.
Praying for Sikkim 🙏 pic.twitter.com/27Y4qpdROm
— Rishi Bagree (@rishibagree) October 5, 2023
ಎಕ್ಸ್ ಮೂಲಕ ಸರ್ಕಾರ ಈ ಹೆಲ್ಪ್‌ಲೈನ್ ನಂಬರ್ ಪ್ರಕಟಿಸಿದೆ. ತುರ್ತು ಪರಿಸ್ಥಿತಿ ಕಾಣಿಸಿಕೊಂಡರೆ ಸ್ಥಿರ ದೂರವಾಣಿ ಸಂಖ್ಯೆ -03592-202892, 03592-221152, ಮೊಬೈಲ್ ಸಂಖ್ಯೆ-8001763383, ಫ್ಯಾಕ್ಸ್-03592-202042 ಅಥವಾ ‘112’ ನಂಬರ್‌ಗೆ ಕರೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.
ಪ್ರವಾಹಪೀಡಿತರ ನೆರವಿಗಾಗಿ ಭಾರತೀಯ ಸೇನೆ ಕೂಡ 3 ಹೆಲ್ಪ್‌ಲೈನ್‌ಗಳನ್ನು ಆರಂಭಿಸಿದೆ. ಕುಟುಂಬ ಸದಸ್ಯರು ನಾಪತ್ತೆಯಾಗಿದ್ದರೆ ಈ ನಂಬರ್‌ಗೆ ಸಂಪರ್ಕಿಸಬಹುದು. ಉತ್ತರ ಸಿಕ್ಕಿಂ ಭಾಗದವರು 8750887741 ನಂಬರ್‌ಗೆ ಕರೆ ಮಾಡಬಹುದು. ಪೂರ್ವ ಸಿಕ್ಕಿಂ ಭಾಗದವರು ಸಂಪರ್ಕಿಸಬೇಕಾದ ನಂಬರ್ 8756991895 ಮತ್ತು ನಾಪತ್ತೆಯಾದ 22 ಯೋಧರ ಬಗ್ಗೆ ವಿಚಾರಿಸಲು 7588302011 ನಂಬರ್ ಡಯಲ್ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.
The situation in Sikkim is precarious as several people have lost their lives and many including our brave Army personnel are missing due to cloudburst and flash floods.
— Mallikarjun Kharge (@kharge) October 5, 2023
Our thoughts are with the people of Sikkim who are battling these distressing times.
The Union Govt must…
ಈ ಸುದ್ದಿಯನ್ನೂ ಓದಿ: Sikkim Flash Floods: ದಿಢೀರ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ; ಹೆಲ್ಪ್‌ಲೈನ್ ನಂಬರ್ ಪ್ರಕಟಿಸಿದ ಸರ್ಕಾರ
ಕೆಲವು ಅಧಿಕಾರಿಗಳ ಪ್ರಕಾರ ಈಗಾಗಲೇ ಸಾವಿನ ಸಂಖ್ಯೆ 40ಕ್ಕೆ ತಲುಪಿದೆ. ಆದರೆ ನಿಖರವಾದ ಸಂಖ್ಯೆಯನ್ನು ಗುರುತಿಸಲು ವರದಿಗಳನ್ನು ಪರಿಶೀಲಿಸಲಾಗುತ್ತಿದೆ. ದುರಂತದ ನಂತರ ಕಾಣೆಯಾದ ಅಥವಾ ಗಾಯಗೊಂಡವರಲ್ಲಿ ಬಹುಪಾಲು ಮಂದಿ ಮಂಗನ್ ಜಿಲ್ಲೆಯ ಚುಂಗ್ಥಾಂಗ್, ಗ್ಯಾಂಗ್ಟಾಕ್ ಜಿಲ್ಲೆಯ ಡಿಚು ಮತ್ತು ಸಿಂಗ್ಟಮ್ ಹಾಗೂ ಪಕ್ಯೋಂಗ್ ಜಿಲ್ಲೆಯ ರಂಗ್ಪೋಗೆ ಸೇರಿದವರು ಎಂದು ಅಂದಾಜಿಸಲಾಗಿದೆ.
ಪರಿಸ್ಥಿತಿ ಅವಲೋಕಿಸಿದ ಬಳಿಕ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಬುಧವಾರ ಚುಂಗ್ಥಾಂಗ್ ಅಣೆಕಟ್ಟಿನ ಸುರಂಗದಲ್ಲಿ ಸಿಲುಕಿರುವ ಜನರು ಮತ್ತು ಪ್ರವಾಸಿಗರನ್ನು ಆದ್ಯತೆಯ ಆಧಾರದ ಮೇಲೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ 3,000ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದಲ್ಲಿ ಸಿಲುಕಿದ್ದಾರೆ ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿ.ಬಿ.ಪಾಠಕ್ ತಿಳಿಸಿದ್ದಾರೆ.