Site icon Vistara News

CJI DY Chandrachud | ವಕೀಲರ ಅಲಭ್ಯತೆಯಿಂದಾಗಿ 63 ಲಕ್ಷ ಕೇಸ್ ಪೆಂಡಿಂಗ್: ಸಿಜೆಐ ಡಿ ವೈ ಚಂದ್ರಚೂಡ್

Justice D Y Chandrachud

ಅಮರಾವತಿ: ವಕೀಲರ ಅಲಭ್ಯತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕೂ ಅಧಿಕ ಕೇಸ್‌ಗಳು ಪೆಂಡಿಂಗ್‌ನಲ್ಲಿದ್ದರೆ, 14 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾತಿಗಳು ಅಥವಾ ಕಾಗದ ಪತ್ರಗಳು ದೊರೆಯದ್ದರಿಂದ ವಿಚಾರಣೆಗೆ ವಿಳಂಬವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (CJI DY Chandrachud) ಅವರು ಹೇಳಿದ್ದಾರೆ.

ಆಂಧ್ರ ಪ್ರದೇಶದ ಜುಡಿಷಿಯಲ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯಗಳನ್ನು ಶ್ರೇಣಿಕೃತ ಮತ್ತು ಆಚರಣೆಯಲ್ಲಿ ಅಧೀನ ನ್ಯಾಯಾಂಗ ಎಂದು ಉಲ್ಲೇಖಿಸುವ ಮತ್ತು ಪರಿಗಣಿಸುವ ವಸಾಹತುಶಾಹಿ ಮನಸ್ಥಿತಿಯಿಂದ ಜನರು ಹೊರಗೆ ಬರಬೇಕು. ಅವು ಕೇವಲ ನ್ಯಾಯಾಂಗದ ಬೆನ್ನೆಲುಬು ಮಾತ್ರವಲ್ಲದೆ ನ್ಯಾಯಾಂಗ ಸಂಸ್ಥೆಯೊಂದಿಗಿನ ಮೊದಲ ಸಂವಾದಿಯೂ ಹೌದು ಎಂದು ಹೇಳಿದರು.

ಅಪರಾಧ ನ್ಯಾಯಾಂಗ ವ್ಯವಸ್ಥೆಯು ಜೈಲಲ್ಲ ಅಲ್ಲ ಬದಲಿಗೆ ಜಾಮೀನು ಎಂಬ ತತ್ವದ ಮೇಲೆ ನಿಂತಿದೆ. ಆದರೆ, ಭಾರತದಲ್ಲಿ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆಯು, ಈ ತತ್ವದ ವಿರುದ್ಧವಾದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಒಂದೇ ದಿನದ ಸ್ವಾತಂತ್ರ್ಯದ ಹರಣವು ತುಂಬಾ ದಿನಗಳ ಸ್ವಾತಂತ್ರ್ಯ ಹರಣಕ್ಕೆ ಸಮವಾಗಿರುತ್ತದೆ ಎಂದು ಅವರು ಹೇಳಿದರು.

ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ (ಎನ್‌ಜೆಡಿಜಿ) ಪ್ರಕಾರ, ದಾಖಲಾತಿಗಳು ಅಥವಾ ಕಾಗದ ಪತ್ರಗಳ ಅಲಭ್ಯತೆಯ ಕಾರಣದಿಂದಾಗಿ ಭಾರತದಲ್ಲಿ ಸುಮಾರು 14 ಲಕ್ಷಕ್ಕೂ ಅಧಿಕ ಪ್ರಕರಣಗಳು ಪೆಂಡಿಂಗ್‌ನಲ್ಲಿವೆ. ಇದು ಕೋರ್ಟ್‌ಗಳು ವ್ಯವಸ್ಥೆಯ ನಿಯಂತ್ರಣ ಮೀರಿದ್ದಾಗಿದೆ ಎಂದು ಡಿ ವೈ ಚಂದ್ರಚೂಡ್ ಅವರು ಹೇಳಿದರು.

ಇದನ್ನೂ ಓದಿ | CJI DY Chandrachud | ಅನ್ಯಜಾತಿಯ ಮದುವೆಗಳಿಂದಾಗಿ ಪ್ರತಿ ವರ್ಷ ನೂರಾರು ಜನರ ಸಾವು: ಸಿಜೆಐ ಚಂದ್ರಚೂಡ

Exit mobile version