Site icon Vistara News

Republic Day 2023 : 74ನೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ತವ್ಯಪಥ ಸಜ್ಜು, 65,000 ಜನ ಸೇರುವ ನಿರೀಕ್ಷೆ

65,000 Expected to Attend 74th Republic Day Procession

ನವ ದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಕರ್ತವ್ಯಪಥದಲ್ಲಿ 74ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದಿಲ್ಲಿ ಪೊಲೀಸರ ಪ್ರಕಾರ ಜನವರಿ 26ರ ಪರೇಡ್‌ಗೆ 65,000 ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಕ್ಯುಆರ್‌ ಕೋಡ್‌ ಮೂಲಕ ನೋಂದಣಿ ಆದವರಿಗೆ ಪರೇಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. (Republic Day 2023) ಭದ್ರತೆಗೆ ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರದಲ್ಲಿ ಅರೆಮಿಲಿಟರಿ ಪಡೆ, ಎನ್‌ಎಸ್‌ಜಿ ಮತ್ತು ದಿಲ್ಲಿ ಪೊಲೀಸರು ಇದ್ದಾರೆ. 150 ಸಿಸಿಟಿವಿ ಕ್ಯಾಮೆರಾಗಳನ್ನು ಕರ್ತವ್ಯಪಥದಲ್ಲಿ (Kartavya Path) ಅಳವಡಿಸಲಾಗಿದೆ. ದಿಲ್ಲಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಳಗ್ಗೆ 10.00ಕ್ಕೆ ಪರೇಡ್‌ ಆರಂಭವಾಗಲಿದೆ. ಇದಕ್ಕೂ ಮುನ್ನ ಬೆಳಗ್ಗೆ 7.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಪರೇಡ್‌ನಲ್ಲಿ ಈಜಿಪ್ತ್‌ ಸೇನಾಪಡೆ:

ಈ ಸಲದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈಜಿಪ್ತ್‌ ಸೇನೆಯ ತುಕಡಿ ಭಾಗಹಿಸಲಿದೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಾಂಧವ್ಯದ 75ನೇ ವರ್ಷಾಚರಣೆಯನ್ನು ಈ ವರ್ಷ ಆಚರಿಸಲಾಗುತ್ತಿದೆ. ಕರ್ನಲ್‌ ಮಹಮ್ಮದ್‌ ಅಬ್ದೆಲ್ ಫತಾ ಎಖಾರಸ್ವೈ ಈಜಿಪ್ತ್‌ ಸೇನಾ ತುಕಡಿಯ ಕಮಾಂಡರ್‌ ಆಗಿದ್ದಾರೆ.

ಈಜಿಪ್ತ್‌ ಅಧ್ಯಕ್ಷ ಅಬ್ದೆಲ್ ಫತೇಹ್‌ ಎಲ್-ಸಿಸಿ ಮುಖ್ಯ ಅತಿಥಿ:

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ತ್‌‌ ಅಧ್ಯಕ್ಷ ಅಬ್ದೆಲ್ ಫತೇಹ್‌ ಅಲ್‌ ಸಿಸಿ (Abdel Fattah el-Sisi) ಅವರು ಭಾಗವಹಿಸುತ್ತಿದ್ದಾರೆ. 4 ದಿನಗಳ ಭಾರತ ಭೇಟಿಗೋಸ್ಕರ ಬಂದಿಳಿದಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅವರಿಗೆ ಆತಿಥ್ಯ ನೀಡಲಾಗುವುದು.

ಬೆಳಗ್ಗೆ 10.30ಕ್ಕೆ ಪಥ ಸಂಚಲನ ಆರಂಭವಾಗಲಿದ್ದು, ಕೋಟ್ಯಂತರ ಮಂದಿ ಮನೆಯಲ್ಲಿಯೇ ಕುಳಿತುಕೊಂಡು ದೂರದರ್ಶನ ಸೇರಿದಂತೆ ಟಿ.ವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಜನವರಿ 29ಕ್ಕೆ ಗಣರಾಜ್ಯೋತ್ಸವ ಆಚರಣೆಗಳು ಮುಕ್ತಾಯವಾಗಲಿದೆ.

Exit mobile version