ನವ ದೆಹಲಿ: ಭಾರತ-ಚೀನಾ ಗಡಿ (Indiಯಲ್ಲಿ ನಾಪತ್ತೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿ 19 ಕಾರ್ಮಿಕರಲ್ಲಿ ಏಳು ಮಂದಿ ಪತ್ತೆಯಾಗಿದ್ದಾರೆ. ಇವರೆಲ್ಲ ಅಸ್ಸಾಂನವರಾಗಿದ್ದು, ಈದ್ ಹಬ್ಬಕ್ಕೆ ಮೇಲಧಿಕಾರಿಗಳು ರಜಾ ಕೊಡಲಿಲ್ಲ ಎಂದು ಮುನಿಸಿಕೊಂಡು, ಯಾರಿಗೂ ಹೇಳದೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಹೊರಟುಹೋಗಿದ್ದರು. ಅದಾಗಿ ಎರಡನೇ ದಿನದಲ್ಲಿ ಒಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿತ್ತು. ಇದೀಗ ಏಳು ಮಂದಿ, ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ದಟ್ಟವಾದ ಅರಣ್ಯದಲ್ಲಿ ಪತ್ತೆಯಾಗಿದ್ದಾರೆ.
ಇದೀಗ ಪತ್ತೆಯಾದ ಕಾರ್ಮಿಕರೆಲ್ಲ ಅಸ್ವಸ್ಥರಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದ್ದರೂ ಇನ್ನಷ್ಟು ವೈದ್ಯಕೀಯ ನೆರವು ಅಗತ್ಯವಿದೆ ಎಂದು ಗಡಿ ರಸ್ತೆ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 12 ಕಾರ್ಮಿಕರ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು, ಭಾರತೀಯ ವಾಯುಸೇನೆ (ಐಎಎಫ್) ಸಹಾಯ ಪಡೆಯಲಾಗಿದೆ. ಇಂದು ಬೆಳಗ್ಗೆಯಿಂದಲೂ ಐಎಎಫ್ ಹೆಲಿಕಾಪ್ಟರ್‌ಗಳು ಏರ್ ಸರ್ವೇ ಮಾಡುತ್ತಿದ್ದಾರೆ.

ಕುರುಂಗ್ ಕುಮೆ ಜಿಲ್ಲೆಯ ಡಾಮಿನ್ ಸರ್ಕಲ್‌ನಲ್ಲಿರುವ ಹುರಿಯಲ್ಲಿ ಬಿಆರ್‌ಒದಿಂದ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿತ್ತು. ಇದರ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರು ಪಡೆದಿದ್ದಾರೆ. ಈ ಕಾರ್ಮಿಕರೆಲ್ಲ ಅಸ್ಸಾಂನವರೇ ಆಗಿದ್ದು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇವರಿಗೆ ಈದ್ ಹಬ್ಬಕ್ಕೆ ರಜೆ ಬೇಕಿತ್ತು. ಆದರೆ ಗುತ್ತಿಗೆದಾರರು ಒಪ್ಪಿರಲಿಲ್ಲ. ಅಲ್ಲಿಂದ ನಾಪತ್ತೆಯಾದ ಈ ಕಾರ್ಮಿಕರು ಎಲ್ಲಿಗೆ ಹೋದರು ಎಂಬುದೇ ಗೊತ್ತಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ನಾಲ್ವರನ್ನು ಮೊದಲು ಪತ್ತೆ ಹಚ್ಚಿದ್ದು ಸ್ಥಳೀಯ ಹಳ್ಳಿಯ ಜನರು. ಬಳಿಕ ಅವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಭಾರತ-ಚೀನಾ ಗಡಿಯಲ್ಲಿ ರಸ್ತೆ ನಿರ್ಮಿಸುತ್ತಿದ್ದ 18 ಕಾರ್ಮಿರು ನಾಪತ್ತೆ; ಒಬ್ಬನ ಶವ ಪತ್ತೆ